ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಿತೀಶ್ ನಂದಿ



ಪ್ರೀತೀಶ್ ನಂದಿ

ಬಹುಮುಖಿ ಸಾಧಕರಾಗಿ, ವಿಶೇಷವಾಗಿ ಮಾಧ್ಯಮಲೋಕದಲ್ಲಿ ಹೆಸರಾಗಿದ್ದ ಪ್ರೀತೀಶ್ ನಂದಿ ನಿಧನರಾಗಿದ್ದಾರೆ.  ಪ್ರಿತೀಶ್ ನಂದಿ ಕವಿ, ವರ್ಣಚಿತ್ರಕಾರ, ಪತ್ರಿಕಾ ಸಂಪಾದಕ,  ಚಲನಚಿತ್ರಗಳು ಮತ್ತು ಕಿರುತೆರೆ ಕಾರ್ಯಕ್ರಮಗಳ ನಿರ್ಮಾಣದ ಉದ್ಯಮಿ, ಪ್ರಾಣಿ ಸಂರಕ್ಷಣಾ ಹೋರಾಟಗಾರ ಹೀಗೆ ಬಹುಮುಖಿಯಾಗಿ ಹೆಸರು. 

ಪ್ರಿತೀಶ್ ನಂದಿ ಅವರು 1951 ಜನವರಿ 15 ರಂದು ಬಿಹಾರದ ಭಾಗಲ್ಪುರದಲ್ಲಿ ಜನಿಸಿದರು. 

ಪ್ರಿತೀಶ್ ನಂದಿ ಅವರು ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ ಪ್ರಕಾಶನದ ನಿರ್ದೇಶಕರಾಗಿದ್ದರು.  1980ರ ದಶಕದಲ್ಲಿ ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ, ದಿ ಇಂಡಿಪೆಂಡೆಂಟ್ ಮತ್ತು ಫಿಲ್ಮ್‌ಫೇರ್‌ ಪತ್ರಿಕೆಗಳ ಸಂಪಾದಕತ್ವವನ್ನು  ಏಕಕಾಲದಲ್ಲಿ ನಿರ್ವಹಿಸಿ ಸುದ್ದಿಯಾಗಿದ್ದರು. 

ಪ್ರಿತೀಶ್ ನಂದಿ  ಇಂಗ್ಲಿಷ್‌ನಲ್ಲಿ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.  ತಮ್ಮದೇ ಕವಿತೆಗಳನ್ನಲ್ಲದೆ ಬಂಗಾಳಿ, ಉರ್ದು ಮತ್ತು ಪಂಜಾಬಿಯಿಂದ ಇತರ ಬರಹಗಾರರ ಕವಿತೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.  ಈಶೋಪನಿಷತ್ತಿ‌ನ ಅವರ ವ್ಯಾಖ್ಯಾನ ಕೂಡ ಹೆಸರಾಗಿದೆ.  ಕಥೆ, ವಾಸ್ತವತೆಯ ಬರಹಗಳು,  ಸಂಸ್ಕೃತದಿಂದ ಶಾಸ್ತ್ರೀಯ ಪ್ರೇಮ ಕಾವ್ಯದ ಅನುವಾದ ಕೃತಿಗಳಿಗೂ ಅವರ ವಿದ್ವತ್ತು ವ್ಯಾಪಿಸಿತ್ತು.  

ಕಲಾವಿದರೂ ಆದ ಪ್ರಿತೀಶ್ ನಂದಿ,  ವರ್ಣಚಿತ್ರಗಳು ಮತ್ತು ಕ್ಯಾಲಿಗ್ರಫಿಯ ಆರು ಪ್ರದರ್ಶನಗಳನ್ನು ನೀಡಿದ್ದರು. 

ಪ್ರಿತೀಶ್ ನಂದಿ ಅವರು 1993ರಲ್ಲಿ ಪ್ರಿತಿಶ್ ನಂದಿ ಕಮ್ಯುನಿಕೇಷನ್ಸ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದರು. ಝಂಕಾರ್ ಬೀಟ್ಸ್, ಚಮೇಲಿ, ಹಜಾರೋನ್ ಖ್ವೈಶೇನ್ ಐಸಿ, ಏಕ್ ಖಿಲಾಡಿ ಏಕ್ ಹಸೀನಾ, ಅನ್ಕಹೀ, ಪ್ಯಾರ್ ಕೆ ಸೈಡ್ ಎಫೆಕ್ಟ್ಸ್, ಬೋ ಬ್ಯಾರಕ್ಸ್ ಫಾರೆವರ್, ಮುಂತಾದ ಹಲವಾರು ಯಶಸ್ವಿ ಚಲನಚಿತ್ರಗಳನ್ನು  ನಿರ್ಮಿಸಿದ್ದರು.

ಪ್ರಿತೀಶ್ ನಂದಿ ಪೀಪಲ್ ಫಾರ್ ಅನಿಮಲ್ಸ್, ಎಂಬ ಭಾರತದ ಮೊದಲ "ಪ್ರಾಣಿ ಹಕ್ಕುಗಳ ಎನ್‌ಜಿಒ' ಸ್ಥಾಪಿಸಿದ್ದರು. ಮುಂದೆ  ಅದನ್ನು ಸಹ-ಸಂಸ್ಥಾಪಕಿ ಮೇನಕಾ ಗಾಂಧಿ ಅವರು ಅಧ್ಯಕ್ಷರಾಗಿ ನಡೆಸುತ್ತಿದ್ದಾರೆ.

ಪ್ರೀತೀಶ್ ನಂದಿ ಅವರು ಕೆಲಕಾಲ ಮಹಾರಾಷ್ಟ್ರದಿಂದ ರಾಜ್ಯಸಭೆಯ ಪ್ರತಿನಿಧಿಯಾಗಿದ್ದರು.

ಪ್ರಿತೀಶ್ ನಂದಿ  2025ರ ಜನವರಿ 8ರಂದು ನಿಧನರಾದರು.

Respects to departed soul poet, journalist and film producer  Pritish Nandy 🌷🙏🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ