ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿದ್ಯಾ ವಿ. ಭಟ್


ವಿದ್ಯಾ ವಿ. ಭಟ್

ವಿದ್ಯಾ ವಿ. ಭಟ್ ಅವರು ಸಂಗೀತ ಕಲಾವಿದೆ, ಸಂಗೀತ ಗುರು, ಚಿತ್ರ ಕಲಾವಿದೆ,  ಮತ್ತು ಸಾಹಿತ್ಯ-ಸಂಸ್ಕೃತಿಗಳಲ್ಲಿ ಅಪಾರ ಆಸಕ್ತೆ.

ಜನವರಿ 8, ವಿದ್ಯಾ ಅವರ ಜನ್ಮದಿನ. ಇವರು ಹುಟ್ಟಿದ ಊರು ಕಾಸರಗೋಡಿನ ಕಾಟುಕುಕ್ಕೆ.  ತಂದೆ ಮಹಾಬಲೇಶ್ವರ ಭಟ್.  ತಾಯಿ ವೆಂಕಟೇಶ್ವರಿ. ಕಾಟುಕುಕ್ಕೆಯಲ್ಲಿ ಶಾಲಾವಿದ್ಯಾಭ್ಯಾಸ ಮುಗಿಸಿ, ಪದವಿವರೆಗಿನ ಕಾಲೇಜು ಶಿಕ್ಷಣವನ್ನು ಮುಲ್ಕಿಯಲ್ಲಿ ಮತ್ತು ಕಾನೂನು ಪದವಿ ಶಿಕ್ಷಣವನ್ನು ಉಡುಪಿಯಲ್ಲಿ ಕೈಗೊಂಡರು.

ಬಾಲ್ಯದಲ್ಲೇ ಸಾಹಿತ್ಯ, ಸಂಗೀತ ಮತ್ತು ಚಿತ್ರಕಲೆಗಳಲ್ಲಿ ಆಸಕ್ತಿ ಮೂಡಿಸಿಕೊಂಡ ವಿದ್ಯಾ ಅವರು ಕೇರಳ ರಾಜ್ಯ ಕಲೋತ್ಸವದಲ್ಲಿ "ಕಲಾತಿಲಕ ಪ್ರಶಸ್ತಿ" ಗೆದ್ದಿದ್ದರು.

ವಿದ್ಯಾ ಅವರು ಪ್ರಾರಂಭದಲ್ಲಿ ವಿದುಷಿ ಶಕುಂತಲ ಕೃಷ್ಣಭಟ್ ಅವರಲ್ಲಿ ಸಂಗೀತ ಸಾಧನೆ ಮಾಡಿದರು. ಮುಂದೆ ಉಡುಪಿಯ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಸರಳಾಯ ಅವರಲ್ಲಿ ಸಂಗೀತ ಸಾಧನೆ ಮಾಡಿದರು.

ವಿದ್ಯಾ ಭಟ್ ಅವರು,  ಪತಿ ವಿದ್ವಾನ್ ವೆಂಕಟೇಶಕೃಷ್ಣ ಭಟ್ ಅವರೊಂದಿಗೆ ಮಂಗಳೂರಿನ ಬಂಟ್ವಾಳದಲ್ಲಿ 'ಶ್ರೀರಾಗಂ ಸ್ಕೂಲ್ ಆಫ್ ಮ್ಯೂಸಿಕ್' ಸಂಸ್ಥೆ ನಡೆಸುತ್ತಿದ್ದು, ಸಂಗೀತ ಶಿಕ್ಷಕಿಯಾಗಿ ಅನೇಕರಿಗೆ ಸಂಗೀತ ಕಲಿಸುತ್ತಿದ್ದಾರೆ. ಹಲವಾರು ಸಂಗೀತ ಕಾರ್ಯಕ್ರಗಳಲ್ಲೂ ಭಾಗಿಯಾಗಿದ್ದಾರೆ.  ಪುತ್ರ ಶಶಾಂಕ್ ಇಂಜಿನಿಯರಿಂಗ್ ವಿದ್ಯಾಸಾಧನೆಯ ಜೊತೆಗೆ ತಾಳವಾದ್ಯ ಕಲಾವಿದರಾಗಿಯೂ ಸಾಧನೆ ಮಾಡಿದ್ದಾರೆ.

ವಿದ್ಯಾಭಟ್ ಅವರು ಸಂಗೀತದ ಜೊತೆಗೆ ಚಿತ್ರಕಲೆ, ಕವಿತೆ ರಚನೆ, ಸುಗಮ ಸಂಗೀತ, ಸಾಹಿತ್ಯ ವ್ಯಾಸಂಗ, ಹೀಗೆ ಹಲವು ನಿಟ್ಟಿನ ಆಪ್ತ ಹವ್ಯಾಸಗಳನ್ನು ರೂಡಿಸಿಕೊಂಡಿದ್ದಾರೆ.  ಎಲ್ಲವೂ ಅವನ ಕೃಪೆ, ಎಲ್ಲರೊಂದಿಗೆ ಪ್ರೀತಿಯಿಂದಿರುವುದೇ ಭಾಗ್ಯ ಎಂಬ ಆಪ್ತಭಾವದ ವಿದ್ಯಾ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Vidya V Bhat 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ