ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಸ್ಕೃತಿ ಸಲ್ಲಾಪಕ್ಕೆ 30 ಲಕ್ಷ ಭೇಟಿ

 



'ಸಂಸ್ಕೃತಿ ಸಲ್ಲಾಪ'ಕ್ಕೆ 30 ಲಕ್ಷ ಭೇಟಿಗಳು ಸಂದ ಸೌಭಾಗ್ಯ


ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ಗೆ ಸಂದ ಸಹೃದಯರ ಭೇಟಿಗಳು ನಿನ್ನೆಗೆ 30 ಲಕ್ಷವನ್ನು ದಾಟಿವೆ.

ಸಾಮಾಜಿಕ ಜೀವನದಲ್ಲಿನ ವಿವಿಧ ಸಾಂಸ್ಕೃತಿಕ ಸದಭಿರುಚಿಗಳತ್ತ ಆತ್ಮೀಯವಾದ ‘ಸಲ್ಲಾಪ’(ಸಂವಹನ)ಕ್ಕೆ ಆಸ್ಪದ ನೀಡುವುದು 'ಸಂಸ್ಕೃತಿ ಸಲ್ಲಾಪ' ಜಾಲತಾಣದ ಆಶಯ.

'ಸಂಸ್ಕೃತಿ ಸಲ್ಲಾಪ' ತಾಣದಲ್ಲಿ 4500 ಕ್ಕೂ ಹೆಚ್ಚು  ಸಾಹಿತ್ಯ,  ಸಂಗೀತ, ನಾಟಕ,  ಸಿನಿಮಾ, ನೃತ್ಯ, ಕಲೆ, ಕ್ರೀಡೆ, ಅಧ್ಯಾತ್ಮ, ವಿಜ್ಞಾನ, ಸಾರ್ವಜನಿಕ ಸೇವೆ, ಜಾನಪದ,   ಕನ್ನಡ ನಾಡು, ಸಂಸ್ಕೃತಿ, ಉದ್ಯಮ ಹೀಗೆ ಹಲವು ವಿಚಾರಗಳ ಹರವು ಇದೆ. 600ಕ್ಕೂ ಹೆಚ್ಚು ವ್ಯಾಪ್ತಿಯ ಗೀತೆಗಳಿವೆ.  153 ಸಂಧಿಗಳ ಕುಮಾರವ್ಯಾಸ ಭಾರತ ಭಾವಾರ್ಥದೊಡನೆ ಲಭ್ಯವಿದೆ. ಜೊತೆಗೆ ಜಯದೇವ ಕವಿಯ ಗೀತಗೋವಿಂದ, ತಿರುಪ್ಪಾವೈ, ಸಂಗ್ರಹ ರಾಮಾಯಣ, ಗೋವಿನ ಕಥೆ, ಗೋಕುಲ ನಿರ್ಗಮನ, ಸೋಮೇಶ್ವರ ಶತಕ ಮುಂತಾದ ಗ್ರಂಥಗಳು ಅರ್ಥ ಸಮೇತ ಲಭ್ಯವಿದೆ.  ಸುಮಾರು ನಾಲ್ಕೈದು ಶತಮಾನಗಳ ಸ್ವಾತಂತ್ರ್ಯ ಹೋರಾಟದ ಅಂತರಾಳವನ್ನು ಅಭಿವ್ಯಕ್ತಿಸುವ ಪ್ರಯತ್ನವೂ ಇಲ್ಲಿದೆ.  ಕನ್ನಡದಲ್ಲಿ ವಿಶ್ವದೆಲ್ಲೆಡೆಯ ಸಾಹಿತ್ಯ, ಸಂಸ್ಕೃತಿ, ಕಲೆ,  ಕ್ರೀಡೆ ಮುಂತಾದ ಎಲ್ಲ ವಿಚಾರಗಳನ್ನು ಅಭಿವ್ಯಕ್ತಿಸುವ ಪ್ರಯತ್ನ ಇಲ್ಲಿದೆ.  ಕನ್ನಡ ನಾಡಿನ ಹಿರಿಮೆಯನ್ನು ಪ್ರಾಚೀನ ಯುಗದಿಂದ ಇಂದಿನವರೆಗಿನ ಕಾಲ ಘಟ್ಟದ ಸ್ಮತಿಗಳನ್ನು ಮೆಲುಕು ಹಾಕುವ ಸಂತಸವೂ ಇಲ್ಲಿದೆ. ಇವುಗಳನ್ನು ಸುಮಾರು 40 ವಿಚಾರದ ಅಧ್ಯಾಯಗಳಲ್ಲಿ ಸೂಕ್ತ Menu ಮತ್ತು search options ಮೂಲಕ ಓದುಗರಿಗೆ ಸುಲಭವಾಗಿ ಅರಸಿ ಓದುವ ಹಾಗೆ ಸೌಕರ್ಯ ಕಲ್ಪಿಸಿದ್ದೇನೆ. (ಪ್ರಧಾನ ವಿಭಾಗಗಳ ನೋಟವನ್ನು ಇಲ್ಲಿನ ಚಿತ್ರದಲ್ಲಿ ನೀಡಿದ್ದೇನೆ). ಗೂಗಲ್ನಲ್ಲಿ ಕನ್ನಡದ ಯಾವುದೇ ವಿಚಾರವನ್ನು ಅರಸುವಾಗಲೂ, ಸಂಸ್ಕೃತಿ ಸಲ್ಲಾಪ ತಾಣದ ಹೆಸರು, ಪ್ರಧಾನ ಕೊಂಡಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬುದು ಸಹ ಸಂತೋಷದ ವಿಷಯ. 

ಇಲ್ಲಿ ಯಾವುದೇ ವಾಣಿಜ್ಯದ ಆಶಯಗಳು ನುಸುಳದ ಹಾಗೆ ಜಾಗೃತಿ ವಹಿಸಿದ್ದೇನೆ.  ಎಲ್ಲವೂ ಮುಕ್ತ ಮುಕ್ತ ಮುಕ್ತ.  ಇದು 'ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ'.  ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡದ ಪ್ರೀತಿಯುಳ್ಳವರಿಗಾಗಿ ಸಮರ್ಪಿತ. 

ಇದು ಫೇಸ್ಬುಕ್‍ನಲ್ಲಿ ಇರುವ ನನ್ನ ಕನ್ನಡ ಸಂಪದ  Kannada Sampada ಪುಟದ ವಿಸ್ತೃತ ರೂಪವಾಗಿದ್ದು ಈ ಪುಟವನ್ನು ಪ್ರಸಕ್ತ 68,000 ಕ್ಕೂ ಹೆಚ್ಚು ಮಂದಿ ಅನುಸರಿಸುತ್ತಿದ್ದಾರೆ.  ನಿಮ್ಮೆಲ್ಲರ ಪ್ರೀತಿಗೆ ನಾನು ಕೃತಜ್ಞ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ