ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಾಯ್ ಮುಖರ್ಜಿ

ಜಾಯ್ ಮುಖರ್ಜ

ಜಾಯ್ ಮುಖರ್ಜಿ ಸಿನಿಮಾಲೋಕ ಕಂಡ ಸುರದ್ರೂಪಿ ನಾಯಕ ನಟ ಮತ್ತು ನಿರ್ದೇಶಕ.  ಅವರು 60ರ ದಶಕದಲ್ಲಿ ಅನೇಕ ಯಶಸ್ವೀ  ಚಿತ್ರಗಳಲ್ಲಿ ನಟಿಸಿದ್ದರು. 

ಜಾಯ್ ಮುಖರ್ಜಿ 1939ರ ಫೆಬ್ರವರಿ 24ರಂದು ಝಾನ್ಸಿಯಲ್ಲಿ ಜನಿಸಿದರು. ಅವರು ಚಲನಚಿತ್ರ ಕುಟುಂಬದ ಹಿನ್ನೆಲೆ ಹೊಂದಿದವರು. ಅವರ ತಾಯಿ ಸತಿದೇವಿ ಖ್ಯಾತ ಹಿಂದಿ ಚಿತ್ರನಟ ಅಶೋಕ್ ಕುಮಾರ್ ಅವರ ಸಹೋದರಿ.  ಮುಖರ್ಜಿ ಅವರ ಸಹೋದರ ಶೋಮು ಮುಖರ್ಜಿ ನಟಿ ತನುಜಾ ಅವರನ್ನು ವಿವಾಹವಾಗಿದ್ದರು. 

ಆರಂಭದಲ್ಲಿ ಜಾಯ್ ಅವರು ಸಿನಿಮಾಕ್ಕೆ ಸೇರುವುದನ್ನು ಅವರ ತಂದೆ ಶಶಿಧರ್ ಮುಖರ್ಜಿ ತೀವ್ರವಾಗಿ ವಿರೋಧಿಸಿದ್ದರು. ಆಘಾ ಜಾನಿ ಕಾಶ್ಮೇರಿ ಅವರ ಒತ್ತಾಯದ ಬಳಿಕ ಸಿನಿಮಾದಲ್ಲಿ ಅಭಿನಯಿಸಲು ಆರಂಭಿಸಿದರು.  'ಲವ್ ಇನ್ ಶಿಮ್ಲಾ' ಮುಖರ್ಜಿ ಅವರ ಪ್ರಥಮ ಚಿತ್ರ. ಮುಂದೆ 'ಫಿರ್ ವಹೀ ದಿಲ್ ಲಾಯಾ ಹೂಂ', 'ಲವ್ ಇನ್ ಟೋಕಿಯೊ', 'ಜಿದ್ದಿ' , 'ಏಕ್ ಮುಸಾಫಿರ್ ಏಕ್ ಹಸೀನಾ' ಮುಂತಾದ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. 

ಜಿತೇಂದ್ರ, ಧರ್ಮೇಂದ್ರ, ರಾಜೇಶ್ ಖನ್ನಾ ಮುಂತಾದ ಹೊಸಬರ  ಆಗಮನದಿಂದ ಬೇಡಿಕೆ ಕಡಿಮೆಯಾದ ಸಂದರ್ಭದಲ್ಲಿ ಮುಖರ್ಜಿ ಸಿನಿಮಾ ನಿರ್ದೇಶನಕ್ಕೆ ಬಂದರು. 'ಲವ್ ಇನ್ ಬಾಂಬೆ', 'ಚೈಲಾ ಬಾಬು', 'ಸಾಂಜ್ ಕಿ ಬೇಲಾ', 'ಉಮೀದ್' ಮೊದಲಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.

ಜಾಯ್ ಮುಖರ್ಜಿ ಅವರ ಆಶಾ ಪರೇಕ್, ಸಾಧನಾ, ಶರ್ಮಿಳಾ ಮುಂತಾದ ನಟಿಯರ ಜೊತೆಗಿನ ಜೋಡಿ, ಅವರ ಅಭಿನಯದಲ್ಲಿನ ಮಹಮದ್ ರಫಿ ಅವರ ಗಾಯನದ ಇಂಪು ಮರೆಯಲಾಗದಂತೆ ಕಣ್ಮುಂದೆ ಬರುತ್ತವೆ.

ಜಾಯ್ ಮುಖರ್ಜಿ 2012ರ ಮಾರ್ಚ್ 9ರಂದು ನಿಧನರಾದರು.

On the birth anniversary of beautiful actor Joy Mukherjee 🌷🌷🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ