ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾತೃಭಾಷೆ ದಿನ


ಮಾತೃಭಾಷೆ ದಿನ

ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಹೆಚ್ಚು. जननी जन्मभूमिश्च स्वर्गादपि गरीयसी
Mother and motherland are superior to Heaven.

ಮಾತೃಭಾಷೆ ಎಂಬುದು ಈ  ಮೇಲ್ಕಂಡ ಭಾವದಲ್ಲಿ ಅಂತರ್ಗತವಾಗಿದೆ ಎಂಬುದು ನನ್ನ ನಂಬಿಕೆ.  ನಾವು ಎಲ್ಲೇ ಹೋಗಬಹುದು,  ವ್ಯವಹಾರಕ್ಕಾಗಿ, ಪ್ರಪಂಚದೊಂದಿಗಿನ ಸಂವಹನಕ್ಕಾಗಿ ಏನನ್ನೇ ಮಾತನಾಡಬಹುದು.  ನಮ್ಮ ಮನಸ್ಸಿನೊಂದಿಗಿನ ನಮ್ಮ ಸಂವಹನ ಸಾಧ್ಯವಿರುವುದು ಮಾತ್ರ, ನಮ್ಮ ಮಾತೃಭಾಷೆಯಲ್ಲಿಯೇ.

2010ರಲ್ಲಿ ನಾನು 'ಕನ್ನಡ ಸಂಪದ' ಪುಟವನ್ನು ಆರಂಭಿಸಿದಾಗ ಬರೆದ ಈ ಮಾತುಗಳು ನನ್ನಲ್ಲಿ ಇಂದೂ ಅದೇ ಮಹತ್ತಿನಲ್ಲಿ ನೆಲೆಸಿವೆ: 

"ನಮಗೆ ಪ್ರೀತಿ ಎಂಬ ಭಾವ ದೊರಕುವುದು ನಮ್ಮ ಮಾತೃಭಾಷೆಯಿಂದ. ಕನ್ನಡಿಗರಾದ ನಮಗೆ ಕನ್ನಡೆವೆಂದರೆ ಪ್ರೀತಿ, ಪ್ರೀತಿ ಎಂದರೆ ಕನ್ನಡ. 

ಪ್ರೀತಿ ಎಂಬುದು ನಮ್ಮ ಜೊತೆ ಸದಾ ಕಾಲ ಇರಬೇಕೆಂದಲ್ಲಿ, ನಾವು ನಮಗೆ ಪ್ರೀತಿಯನ್ನು ದೊರಕಿಸಿಕೊಡುವ ಉತ್ತಮ ಅಂಶಗಳ ಜೊತೆಯಲ್ಲಿ ಸದಾ ಇರಬೇಕು. 

ಕನ್ನಡವೆಂಬ ಹೃದ್ಭಾವದಲ್ಲಿನ ಪ್ರೀತಿಯ ಚಿಂತನೆಗಳನ್ನು ನಾವು ನಮ್ಮ ಸಾಹಿತ್ಯ, ಸಮಾಜ, ಕಲೆ, ವಿನೋದ, ಸಂಸ್ಕೃತಿ ಮತ್ತು ಬದುಕಿನ ಸೌಂದರ್ಯಗಳಲ್ಲಿ ಯಥೇಚ್ಛವಾಗಿ ಕಾಣುತ್ತೇವೆ. ನಮಗೆ ದೊರೆತ ಸ್ವಾದಿಷ್ಟವಾದುದನ್ನು ಎಲ್ಲರೊಂದಿಗೆ ಕೂಡಿ ಸವಿದರೆ ಆ ಸವಿಯ ಸ್ವಾದ ಮತ್ತಷ್ಟು ಹೆಚ್ಚಾಗಿರುತ್ತದೆ. 

ಈ ಕನ್ನಡವೆಂಬ ಕನ್ನಡಿಯಲ್ಲಿ ಕಂಡ ಹಿರಿಮೆ, ಸಿರಿ, ಸಂಸ್ಕೃತಿ, ಸಂಪದ, ಸಾಹಿತ್ಯ, ಭವ್ಯ ಪರಂಪರೆಯನ್ನು ಎಲ್ಲರೊಂದಿಗೆ ಹಂಚಿ ಸವಿಯುವುದರ ಪ್ರೇರಕವೇ ನನ್ನ 'ಕನ್ನಡ ಸಂಪದ".  

ಮುಂದೆ ಅದನ್ನು ಅಂತರಜಾಲದಲ್ಲಿ ಸಲ್ಲಾಪಿಸುತ್ತಿರುವುದು ನನ್ನ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com. 

ನನ್ನ ಮಾತೃಭಾಷೆಗಿಂತ ಹಿರಿದಾದ ಸಂಪದ ನನಗೆ ಮತ್ತೊಂದಿಲ್ಲ.  ಆ ಭಾವಕ್ಕೆ ನಾನು ಸದಾ ಕೃತಜ್ಞ. 

Photo: At Kukkarhalli Lake, Mysore in the year 2013


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ