ಸುಭಾಸ ಬಿ ಕಾಖಂಡಕಿ
ಸುಭಾಸ ಬಿ ಕಾಖಂಡಕಿ
ಡಾ. ಸುಭಾಸ ಕಾಖಂಡಕಿ ಅವರು ಒಂದೆಡೆ ಮಹಾನ್ ವಿಜ್ಞಾನಿ. ಮತ್ತೊಂದೆಡೆ ಮಹಾನ್ ದಾಸವರೇಣ್ಯರಾದ ಶ್ರೀ ಪ್ರಸನ್ನ ವೆಂಕಟದಾಸರ ವಂಶಸ್ಥರಾಗಿ ತಮ್ಮ ಪತ್ನಿ ಮಹಾನ್ ಕನ್ನಡ ಬರಹಗಾರ್ತಿ ರೇಖಾ ಕಾಖಂಡಕಿ ಅವರ ಜೊತೆಗೂಡಿ ದಾಸ ಸಾಹಿತ್ಯಕ್ಕೆ ಬೃಹತ್ ಕೊಡುಗೆ ನೀಡುತ್ತಿದ್ದಾರೆ. ಜೊತೆಗೆ ಕನ್ನಡ ಸಾಹಿತ್ಯ- ಸಾಂಸ್ಕೃತಿಕ ಬೆಳವಣಿಗೆ ಮತ್ತು ಅನೇಕ ರೀತಿಯ ಸಮಾಜೋದ್ಧಾರದ ಕೆಲಸಗಳಲ್ಲಿ ನಿರಂತರ ಭಾಗಿಯಾಗುತ್ತ ಬೃಹತ್ ಕೆಲಸ ಮಾಡುತ್ತಿದ್ದಾರೆ.
ಸುಭಾಸ ಕಾಖಂಡಕಿ ಅವರು ಬೆಂಗಳೂರಿನ ಡಿಫೆನ್ಸ್ ರಿಸರ್ಚ್ ಅಂಡ್ ಡೆವೆಲಪ್‍ಮೆಂಟ್ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಗಳಾಗಿ ಮತ್ತು ಅಡಿಷನಲ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದವರು.
ಸುಭಾಸ ಕಾಖಂಡಕಿ ಅವರು ತಮ್ಮ ವಂಶದ ಪೂರ್ವಜರಾದ ಕ್ರಿ. ಶ. 1680 - 1752 ಅವಧಿಯಲ್ಲಿ ನಮ್ಮ ಕನ್ನಡ ನಾಡನ್ನು ದಾಸಸಾಹಿತ್ಯದ ಪರಂಪರೆಯಲ್ಲಿ ಶ್ರೀಮಂತಗೊಳಿಸಿದ ಶ್ರೀ ಪ್ತಸನ್ನ ವೆಂಕಟದಾಸರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ದಾಸ ಸಾಹಿತ್ಯ, ಅಧ್ಯಾತ್ಮ, ಸಂಸ್ಕೃತಿ ಮತ್ತು ಗ್ರಾಮಾಂತರ ಜನರ ಅಭಿವೃದ್ಧಿ ಪೂರಕ ಕಾರ್ಯಗಳನ್ನು ಕೈಗೆತ್ತಿಕೊಂಡು, ತಮ್ಮ ಪತ್ನಿ ಮಹಾನ್ ಬರಹಗಾರ್ತಿ ರೇಖಾ ಕಾಖಂಡಕಿ ಮತ್ತು ಸಮಾನ ಮನಸ್ಕರೊಡಗೂಡಿ ದೊಡ್ಡ ರೀತಿಯ ಕೆಲಸ ಮಾಡುತ್ತಿದ್ದಾರೆ. ಈ ಕುರಿತಾದ ಸಮಗ್ರ ವಿವರಗಳು http://www.prasannavenkatadasaru.org ತಾಣದಲ್ಲಿ ಲಭ್ಯವಿದೆ.
ಪೂಜ್ಯರಾದ ಸುಭಾಸ ಕಾಖಂಡಕಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Dr. Subhas Kakhandaki 🌷🙏🌷
ಕಾಮೆಂಟ್‌ಗಳು