ಸುಮಾ ಸಂಜೀವ್
ಡಾ. ಸುಮಾ ಸಂಜೀವ್ ಬಹುಮುಖಿ ಪ್ರತಿಭಾನ್ವಿತೆ.
ಮಾರ್ಚ್ 9, ಸುಮಾ ಅವರ ಜನ್ಮದಿನ. ಬಿ.ಎ., ಬಿ.ಇಡ್, ಎಂ.ಎ ಕನ್ನಡ, ಎಂ.ಎ (ಮಾಸ್ ಕಮ್ಯೂನಿಕೇಶನ್ ಅಂಡ್ ಜರ್ನಲಿಸಂ), ಹಿಂದಿಯಲ್ಲಿ ಪದವಿ, ಡಿಪ್ಲೋಮೊ ಇನ್ ಜರ್ನಲಿಸಂ ಸೇರಿದಂತೆ ಅನೇಕ ವಿದ್ಯಾಸಾಧನೆಗಳನ್ನು ಮಾಡಿರುವ ಇವರು "ಆಧುನಿಕ ದಾಸ ಸಾಹಿತ್ಯದ ಚತ್ವಾರಿ ಶೃಂಗಗಳು ಒಂದು ಅಧ್ಯಯನ" ಮಹಾಪ್ರಬಂಧಕ್ಕೆ ಪಿಎಚ್.ಡಿ ಗಳಿಸಿದ್ದಾರೆ. ಜೊತೆಗೆ ಆಫೀಸ್ ಆಟೋಮೇಷನ್ ಮತ್ತು ಕಂಪ್ಯೂಟರ್ ತಂತ್ರಜ್ಞಾನದಂತಹ ವಿಶೇಷ ತರಬೇತಿಗಳನ್ನು ಸಹ ಗಳಿಸಿದ್ದಾರೆ.
ಸುಮಾ ಅವರು ಅನೇಕ ಪ್ರಸಿದ್ಧ ಕಾಲೇಜುಗಳಲ್ಲಿ ಕನ್ನಡವನ್ನ ಬೋಧಿಸುತ್ತ ಬಂದಿದ್ದಾರೆ. ಆಸಕ್ತರಿಗೆ ಕಲಾಶಿಕ್ಷಣಬನ್ನೂ ನೀಡುತ್ತ ಬಂದಿದ್ದಾರೆ.
ಸುಮಾ ಅವರು 1999-2000ದ ರಾಷ್ಟ್ರೀಯ ಮಟ್ಟದ ಚಿಂತನ 3 ಡಿ ಸೈನ್ಸ್ ಆರ್ಟಿಸ್ಟ್ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. ಸೈನ್ಸ್ 2000 ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಯಾಗಿ ಪ್ರಥಮ ರ್‍ಯಾಂಕ್ ಸಾಧನೆ ಮಾಡಿದ್ದರು.
ಸುಮಾ ಅವರಿಗೆ ಕಸೂತಿ ಕಲೆ, ಚಿತ್ರಕಲೆ, ವರ್ಣಕಲೆ, ಜರ್ದೋಸಿ ಮುಂತಾದ ಕಲೆಗಳಲ್ಲಿ ಪರಿಣತಿ ಇದೆ. ಓದು ಬರಹದಲ್ಲಿ ಅಪಾರ ಆಸಕ್ತಿ ಉಳ್ಳ ಇವರು ಕಥೆ, ಕಾದಂಬರಿ ಮತ್ತು ಬಹುಮುಖಿ. ಸಾಧನೆ ಮಾಡಿದ್ದಾರೆ. ಇವರ ಬಹುಮುಖಿ ಬರಹಗಳು ನಾಡಿನ ಹಸರಾಂತ ನಿಯತಕಾಲಿಕಗಳಲ್ಲಿ ಬೆಳಕು ಕಂಡಿವೆ.
ಸುಮಾ ಅವರ ಮೊದಲ ಕಥೆ ‘ತಿರುವು' ರಾಜ್ಯಮಟ್ಟದ ಕಥಾ ಕಮ್ಮಟಕ್ಕೆ ಆಯ್ಕೆಗೊಂಡು, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ 'ಬಯಲು ಬೇರು ಚಿಗುರು' ಕಥಾಸಂಕಲನದಲ್ಲಿ ಪ್ರಕಟಗೊಂಡಿತು. ಧಾರವಾಡದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಕರಡು ತಿದ್ದುವ ಕಮ್ಮಟದಲ್ಲಿ ಭಾಗಿಯಾಗಿದ್ದರು. 'ದೈವದ ಚಿತ್ತಾರ' ಇವರ ಪ್ರಕಟಿತ ಕಥಾಸಂಕಲನ. 'ಜ್ಞಾನಗಂಗೆ' ಭಾಗೀರಥಮ್ಮ ಇವರ ಮತ್ತೊಂದು ಕೃತಿ. ಸುಮ ಅವರು ಹಂಪಿ ವಿಶ್ವವಿದ್ಯಾಲಯ ಮತ್ತು ಇತರ ಸಂಸ್ಥೆಗಳ ಅನೇಕ ಸಾಹಿತ್ಯ, ವೈಚಾರಿಕ ಮತ್ತು ಸಮಾಜಮುಖಿ ಕಮ್ಮಟಗಳಲ್ಲೂ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದಾರೆ. ಉದಯ ವಾಹಿನಿಯ 'ಸಿರಿ' ಮಹಿಳಾ ಕಾರ್ಯಕ್ರಮಗಳು ಮತ್ತು ಸುವರ್ಣ ವಾಹಿನಿಯ ಪಾಕವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಗಾಯನದಲ್ಲೂ ಪರಿಣತಿ ಇರುವ ಇವರು ಅನೇಕ ಸಂಗೀತ, ಸಾಹಿತ್ಯ ಮತ್ತು ಕಲಾಸಾಧಕರೊಂದಿಗೆ ಮಾತುಕತೆಗಳನ್ನೂ ನಡೆಸಿದ್ದಾರೆ. ಆಯುರ್ವೇದಿಯ ಗುಣಗಳುಳ್ಳ ಸಹಜ ವಸ್ತುಗಳನ್ನು ಬಳಸಿ ಸೌಂದರ್ಯ ಸಾಧನಗಳನ್ನು ಅಭವೃದ್ಧಿಪಡಿಸಿ ಅವುಗಳಲ್ಲಿ ತರಬೇತಿಯನ್ನೂ ನೀಡುತ್ತಿದ್ದಾರೆ.
ಸುಮಾ ಅವರ 'ಜ್ಞಾನಗಂಗೆ' ಕೃತಿಗೆ ಸಂಜೀವ್ ಅವರಿಗೆ ರಾಜ್ಯಮಟ್ಟದ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ - 2006, ಜಯಪ್ರಕಾಶ್ ನಾರಾಯಣ್ ಎಕ್ಸೆಲೆನ್ಸ್ ಅವಾರ್ಡ್ - 2007, ಸುಭಾಷ್ ಚಂದ್ರಬೋಸ್ ರಾಷ್ಟ್ರೀಯ ಯುವರತ್ನ ಸಾಹಿತ್ಯ ಪುರಸ್ಕಾರ್ 2007, ಬಸವ ಚೇತನ ಸಾಹಿತ್ಯ ಪ್ರಶಸ್ತಿ, ತೆಂಗಿನ ಕಾಯಿ ಚಿಪ್ಪಿನಲ್ಲಿನ ಕಲಾಕೌಶಲಕ್ಕಾಗಿ ಉದಯ ಸಿರಿ ಸಂಭ್ರಮ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ 2024 ಮುಂತಾದ ಗೌರವಗಳು ಸಂದಿವೆ.
ಪ್ರತಿಭಾನ್ವಿತೆ ಸುಮಾ ಸಂಜೀವ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
Happy birthday Suma Sanjeev K 🌷🌷🌷
ಕಾಮೆಂಟ್‌ಗಳು