ಶಿಲ್ಪಾ ಶ್ರೀವತ್ಸ
ಶಿಲ್ಪಾ ಶ್ರೀವತ್ಸ ಅವರು ಬಹುಮುಖಿ ಬರಹಗಾರ್ತಿ ಮತ್ತು ಕನ್ನಡ ಸಾಹಿತ್ಯಪ್ರೇಮಿ.
ಮಾರ್ಚ್ 10, ಶಿಲ್ಪಾ ಅವರ ಜನ್ಮದಿನ. ಸ್ನಾತಕೋತ್ತರ ಪದವೀಧರೆಯಾದ ಇವರು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೂ ಕನ್ನಡ ಸಾಹಿತ್ಯದಲ್ಲಿ ಶ್ರದ್ಧೆ ಮೂಡಿಸಿಕೊಂಡವರು. ತಾಯಿ ಸವಿತಾ ರಮೇಶ್ ಅವರೂ ಬರಹಗಾರ್ತಿ.
ಶಿಲ್ಪಾ ಅವರ ಕಥೆ, ಕವನ, ಚುಟಕ, ಚಿಂತನೆ ಮುಂತಾದ ಬಹುಮುಖಿ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಕಂಗೊಳಿಸಿವೆ.
ತಾಯಿ ಸವಿತಾ ರಮೇಶ್ ಮತ್ತು ತಮ್ಮ ಕತೆಗಳನ್ನು 'ಹೊಂಗನಸು' ಎಂಬ ಜುಗಲ್ ಬಂಧಿ ಸಂಕಲನವಾಗಿ ಪ್ರಕಟಿಸಿರುವ ಶಿಲ್ಪಾ ಅವರು 'ನಲುಮೆಯ ನೌಕೆ' ಎಂಬ ಕಾದಂಬರಿಯನ್ನೂ ಪ್ರಕಟಿಸಿದ್ದಾರೆ.
ಉತ್ಸಾಹಿ ಸಾಹಿತ್ಯಪ್ರೇಮಿ ಬರಹಗಾರ್ತಿ ಶಿಲ್ಪಾ. ಶ್ರೀವತ್ಸ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday Shilpa Srivatsa 🌷🌷🌷
ಕಾಮೆಂಟ್‌ಗಳು