ಇವಳು ಯಾರು
ಕೆ. ಎಸ್. ನರಸಿಂಹಸ್ವಾಮಿಗಳ ಈ ಸುಂದರ ಗೀತೆ ಇಂದಿಗೆ 62 ವರ್ಷಗಳ ಹಿಂದೆ ಚಿತ್ರಗೀತೆಯಾಗಿ ರೂಪುಗೊಂಡಿತಂತೆ
ಇವಳು ಯಾರು ಬಲ್ಲೆಯೇನು
ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು
ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುoಬ ಹೂವು ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆ ಹಜ್ಜೆಗೆ
ಒಂದು ದೊಡ್ಡ ಮಲ್ಲಿಗೆ
ಅoಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆ ಇಂಪು
ಮೋಹದ ಮಲ್ಲಿಗೆಯ ಕಂಪು
ಕರೆದುವೆನ್ನನು
ನಾನು ಹಿಡಿಯ ಹೋದೆನು
ಬಂಗಾರದ ಬೆಳಕಿನೊಳಗೆ
ಮುಂಗಾರಿನ ಮಿoಚು ಬೆಳಗೆ
ಇಳೆಗಿಳಿದಿಹ ಮೋಡದೊಳಗೆ
ಮೆರೆಯಿತಿದ್ದಳು ನನ್ನ ಕರೆಯುತಿದ್ದಳು
ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ
ಚಲನಚಿತ್ರ: ಗೌರಿ
ನಿರ್ದೇಶನ: ಎಸ್.ಕೆ.ಎ.ಚಾರಿ
ಇಲ್ಲಿ ಕೇಳಿ
https://youtu.be/_16SR5Ca4Ww?feature=shared
ಕಾಮೆಂಟ್‌ಗಳು