ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀರೇಂದ್ರ ರಾವಿಹಾಳ್


 ವೀರೇಂದ್ರ ರಾವಿಹಾಳ್


ವೀರೇಂದ್ರ ರಾವಿಹಾಳ್ ನಗೆಮೊಗದ ಸಿರಿಯ ಬರಹಗಾರರಾಗಿ ನಮ್ಮ ನಡುವೆ ಕಂಗೊಳಿಸುತ್ತಿರುವವರು.

ಮಾರ್ಚ್ 12,  ವೀರೇಂದ್ರ ರಾವಿಹಾಳ್ ಆವರ ಜನ್ಮದಿನ.   ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನವರಾದ ಇವರು ಮೂಲತಃ ವ್ಯಾಪಾರಿಗಳಾಗಿದ್ದು ವ್ಯಾಸಂಗದ ದಿನಗಳಿಂದಲೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. 'ಕಲ್ಲುಗಳು ಬೇಕು ಗೆಳೆಯ' ಇವರ ಮೊದಲ ಕವನ ಸಂಕಲನ.  ನಾರಂಶೆಟ್ಟಿ ಉಮಾಮಹೇಶ್ವರರಾವು ಅವರ ಮಕ್ಕಳ ಕಾದಂಬರಿಯನ್ನು 'ಕಾಲದ ಹುಡುಗ' ಎಂದು ಕನ್ನಡದಲ್ಲಿ ರೂಪಾಂತರಿಸಿ ಪ್ರಕಟಿಸಿದ್ದಾರೆ.  'ಡಂಕಲ್ ಪೇಟೆ' ಕಥಾ ಸಂಕಲನ ಇವರ ಇತ್ತೀಚಿನ ಜನಪ್ರಿಯ ಕೃತಿ.

ವೀರೇಂದ್ರ ರಾವಿಹಾಳ್  ಅವರಿಗೆ 1996 ರಲ್ಲಿ ಚಿತ್ರ ಸಾಹಿತಿ ಚಿ.ಉದಯಶಂಕರ್ ಸ್ಮರಣಾರ್ಥ ಪ್ರೇಮಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2012 ರ ಸಕ್ರಮಣ ಸಣ್ಣ ಕಥಾ ಪುರಸ್ಕಾರ,‌ ಸಾಹಿತ್ಯ ಪರಿಷತ್ತಿನ ಕೆ. ವಿ. ರತ್ನಮ್ಮ ದತ್ತಿ ಪ್ರಶಸ್ತಿ,‌ 2021ರ ಸಾಲಿನ ಉತ್ಥಾನ ಕಥಾ ಪ್ರಶಸ್ತಿ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ', ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಸಂದಿವೆ.

ವೀರೇಂದ್ರ ರಾವಿಹಾಳ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ