ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಶಿವಲಿಂಗಪ್ಪ ಹಂದಿಹಾಳು


ಕೆ. ಶಿವಲಿಂಗಪ್ಪ ಹಂದಿಹಾಳು

ಕೆ. ಶಿವಲಿಂಗಪ್ಪ ಹಂದಿಹಾಳು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲಸಾಹಿತ್ಯ ಪುರಸ್ಕಾರ'


ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2025ನೇ ಸಾಲಿನ ‘ಬಾಲ ಸಾಹಿತ್ಯ ಪುರಸ್ಕಾರ’ ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್‌’ ಸಣ್ಣ ಕಥೆಗಳ ಸಂಕಲನಕ್ಕೆ ಲಭಿಸಿದೆ.

ಅಕ್ಟೋಬರ್ 31, ಕೆ. ಶಿವಲಿಂಗಪ್ಪ ಅವರ ಜನ್ಮದಿನ.  ಇವರು ಬಳ್ಳಾರಿ ಜಿಲ್ಲೆಯ ಹಂದಿಹಾಳು ಗ್ರಾಮದವರು. ಶೈಕ್ಷಣಿಕವಾಗಿ  ಎಂ.ಎ., ಬಿ.ಇಡಿ (ಪಿ.ಹೆಚ್.ಡಿ).,ಎನ್.ಇ.ಟಿ.(ಕನ್ನಡ) ಪದವೀಧರರು. ಪ್ರಸ್ತುತ ಸ. ಹಿ. ಪ್ರಾ. ಶಾಲೆ ಹಂದಿಹಾಳ ಗ್ರಾಮದ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ. 

ಶಿವಲಿಂಗಪ್ಪ ಅವರು ಬಳಪ (ಮಕ್ಕಳ ಮಾಸ ಪತ್ರಿಕೆ) ಸ್ಥಾಪಕ ಸಂಪಾದಕರಾಗಿ, ಕನಕ ಅಧ್ಯಯನ ಸಂಶೋಧನಾ ಸಂಸ್ಥೆಯಿಂದ ಹೊರತರುತ್ತಿರುವ ತತ್ವಪದಗಳ ಸಂಪುಟ ಸಂಪಾದನಾ ಕಾರ್ಯದಲ್ಲಿ ಬಳ್ಳಾರಿ ಜಿಲ್ಲೆಯ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಶಿವಲಿಂಗಪ್ಪನವರ ಕೃತಿಗಳಲ್ಲಿ 'ನಾನು ಮತ್ತು ಕನ್ನಡಕ' (ಕವನ ಸಂಕಲನ),  ಎಳೆಬಿಸಿಲು (ಮಕ್ಕಳ ಸಾಹಿತ್ಯ ಸಂಪದ), ಶಾವೋಲಿನ್  (ಇಂಗ್ಲಿಷ್ ಮೂಲದ ಮಕ್ಕಳ ಕತೆಗಳು), ಆನಂದಾವಲೋಕನ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ಬಳ್ಳಾರಿಯ ಬೆಡಗು (ಪ್ರಾತಿನಿಧಿಕ ಕಥಾ ಸಂಕಲನ), ದಿ ಯಂಗ್ ಸೈಂಟಿಸ್ಟ್, (ಮಕ್ಕಳ ಕಾದಂಬರಿ) 'ನೋಟ್ ಬುಕ್' ಮಕ್ಕಳ ಕಥಾ ಸಂಕಲನ ಸೇರಿವೆ.  ಲ

ಶಿವಲಿಂಗಪ್ಪನವರಿಗೆ   ಶಾವೋಲಿನ್ ಕೃತಿಗೆ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ‘ನಾನು ಮತ್ತು ಕನ್ನಡಕ’ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ (2010), ಕರವೇ ನಲ್ನುಡಿ ಕಥಾ ಪ್ರಶಸ್ತಿ (2012), ಆಜೂರು ಪ್ರತಿಷ್ಠಾನ ಪ್ರಶಸ್ತಿ (2017), ಅಷ್ಠ ದಿಗ್ಗಜ ಪ್ರಶಸ್ತಿ (2017), ಹೈದರಾಬಾದಿನ ಗುತ್ತಿ ನಾರಾಯಣರೆಡ್ಡಿ ತೆಲುಗು ಪೀಠಂ ವತಿಯಿಂದ ಗೌರವ, ಮಕ್ಕಳ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ‘ರಾಜ್ಯ ಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿ 2020, ಶ್ರೀ ಕೃಷ್ಣ ದೇವರಾಯ ವಂಶಸ್ಥರಿಂದ ರಾಷ್ಟ್ರೀಯ ಪ್ರಶಸ್ತಿ ಹಾಗೂ ನೋಟ್ ಬುಕ್ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯಕ್ಕಾಗಿನ ಪ್ರಶಸ್ತಿ ಸಂದಿವೆ.

ಕೆ. ಶಿವಲಿಂಗಪ್ಪ ಹಂದಿಹಾಳು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

Hearty congrats Shivalingappa K Handyal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ