ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜ್ಯೋತಿ ಗಾಂವಕರ


ಜ್ಯೋತಿ ಗಾಂವಕರ

ಜ್ಯೋತಿ ಗಾಂವಕರ ನನಗೆ ತುಂಬ ಇಷ್ಟವಾದ ಬರಹಗಾರ್ತಿ.  ಅವರು ಪುಸ್ತಕ, ಪತ್ರಿಕೆ ಇತ್ಯಾದಿಗಳಿಗೆ ಬರೆಯಬೇಕು ಎಂಬುದರ ಬಗ್ಗೆ ತಲೆಕೆಡಿಸಿಕೊಂಡವರಲ್ಲ ಎಂದು ನನ್ನ ತಿಳುವಳಿಕೆ.  ಅವರಿಗೆ ...


ಬದುಕು ಒಂದು ಸಹಜ ಹರಿವು

ಬರಹ ಬದುಕಿನ ಸಹಜ ಅರಿವು


ಜ್ಯೋತಿ ಅವರ ಬರಹಳಲ್ಲಿ ಬದುಕಿನ ಎಲ್ಲ ಸಂಗತಿಗಳ ಉಪಸ್ಥಿತಿಗಳೂ ಇವೆ.  ಬಾಲ್ಯ, ಮನೆ ಅಡುಗೆ ಕೆಲಸ, ಕೃಷಿ ಕೆಲಸ, ಪ್ರಕೃತಿ, ಮಕ್ಕಳು, ವಿದ್ಯಾಭ್ಯಾಸ, ಸಂಬಂಧಗಳು, ಸ್ನೇಹ, ವಿಭಿನ್ನ ಮನದ ಚಿಂತನೆಗಳು, ಹಲವು ತಲೆಮಾರುಗಳು, ಹಬ್ಬಗಳು, ಸಮಾರಂಭಗಳು, ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ , ಐಪಿಎಲ್, ಬದುಕಿನ ಕಷ್ಟ ನಷ್ಟಗಳು ಹೀಗೆ ಯಾವುವೂ ಅವರ ಅಭಿವ್ಯಕ್ತಿಗಳಿಂದ ಮಿಸ್ ಆಗುವುದಿಲ್ಲ.  ಇಲ್ಲಿ ನೋಡಿ, ಮೌನವೂ ಕೂಡ....


ಉತ್ತರಿಸದೆ ಹೋದರೆ 

ಉಪೇಕ್ಷಿಸಿದರೆ,

ನಿರಾಕರಿಸಿದರೆ,

ಬೆಲೆ ಕೊಡದಿದ್ದರೆ,

ಅರ್ಥವಾಗದಿದ್ದರೆ

ಅಪಾರ್ಥ ಮಾಡಿಕೊಂಡರೆ...


ಕಟುವಾಯಿತೇನೋ

ಕಿರಿಕಿರಿ ಆಯಿತೇನೋ

ಹೆಚ್ಚು ಕಡಿಮೆ ಆಯಿತೇನೋ 

ಬೇಸರವಾಯಿತೆನೋ

ಬೋರ್ ಆಯಿತೇನೋ....

ಇವೆಲ್ಲವೂ

"ಮಾತುಗಳಿಗೆ" ಮಾತ್ರ ಅನ್ವಯ...


"ಮೌನಕ್ಕೆ" ಯಾವುದರ ಹಂಗಿಲ್ಲ..

#ಜ್ಯೋ 


---


ಯಾವುದನ್ನೂ ಅತಿಯಾಗಿ ಅವಲಂಭಿಸದೆ, ಯಾವುದಕ್ಕೂ ಕೊಂಕಿಲ್ಲದೆ, ಏನನ್ನೂ ಉಪೇಕ್ಷಿಸದೆ, ಎಲ್ಲದಕ್ಕೂ ತನ್ನದೇ ಆದ ಮಹತ್ವವಿದೆ ಎಂಬ ಅವರ ಮನೋಭಾವವವೂ ಇಷ್ಟವಾಗುವಂತದ್ದು.


ನಿಖರತೆ ಇಲ್ಲದ 

ಚಂದಿರನ ಬೆಳಕನ್ನು ನಂಬಿಕೊಂಡಿರಲಾರೆ.

ನಕ್ಷತ್ರದ ಹೊಳಪನ್ನು, 

ನನ್ನೊಳಗೆ 

ಸದಾ ಕಾಲ ಕಾಪಿಟ್ಟುಕೊಳ್ಳುತ್ತೇನೆ.


ಬಂದು ಹೋಗುತ್ತಿರುವ 

ಬೀದಿ ದೀಪದ ನಾಟಕವನ್ನು 

ನಂಬಲಾರೆ.

ಹಣತೆಯ ಮಂದ ಬೆಳಕೊಂದನ್ನು,

ನನ್ನೊಳಗೆ 

ಸದಾ ಕಾಲ ಬೆಳಗಿಸಿಕೊಂಡಿದ್ದೇನೆ 


ಹಗಲಷ್ಟೇ ಹೊಳೆದು 

ಸಂಜೆ ನುಣ್ಣಗೆ ಜಾರಿಕೊಳ್ಳುವ 

ಸೂರ್ಯನ ಆಟಗಳು 

ಅಭ್ಯಾಸವಾಗಿಬಿಟ್ಟಿದೆ.

ಸಂಜೆಯ ಕತ್ತಲೆಗೊಂದು 

ಚೆಂದದ ದೀಪ ಹಚ್ಚಿಡುವುದ ಕಲಿತಿದ್ದೇನೆ. 


ಯಾಕೆಂದರೆ 

ಬೆಳಕಿಲ್ಲದೇ ಬದುಕಲಾಗುವದಿಲ್ಲ.

............................#ಜ್ಯೋ

ಅತಿಯಾದ ಹಾಸ್ಯ, ಅತಿಯಾದ ಚಿಂತನೆ, ಅತಿಯಾದ ಟೀಕೆ, ಅತಿಯಾದ ಆದರ, ಅತಿಯಾದ ಅನಾದಾರ ಇವ್ಯಾವುವೂ ಇಲ್ಲದೆ, ಎಲ್ಲವನ್ನೂ ಬದುಕಿನ ಸಹಜ ಸಾಕ್ಷೀಪ್ರಜ್ಞೆಯ ಅಭಿವ್ಯಕ್ತಿಯಲ್ಲಿ ಕಾಣಿಸುತ್ತಾ ಹೋಗುವ ಶೈಲಿ ಜ್ಯೋತಿ ಅವರದು.  

ಇಂದು ಅವರ ಹುಟ್ಟುಹಬ್ಬವೇನಲ್ಲ.  ಆದರೂ ನನ್ನ ಮೆಚ್ಚಿನ ಬರಹಗಾರ್ತಿಯನ್ಬು ಒಂದು ಕ್ಷಣ ನೆನಪು ಮಾಡಿಕೊಂಡೆ.


B Jyoti Gaonkar 


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ