ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಕಮಾಲ್ ಅಹ್ಮದ್


 ಎಂ. ಕಮಾಲ್ ಅಹ್ಮದ್ 


ಕಮಾಲ್ ಅಹ್ಮದ್ ಅವರು ಪ್ರಸಿದ್ಧ ಚಿಕಣಿ ಚಿತ್ರಕಲಾವಿದರು.  ಅವರ ಕೃತಿಗಳಲ್ಲಿ ಭಾರತೀಯ ಪ್ರಾಚೀನ ಚಿಕಣಿ ಚಿತ್ರಕಲೆಯ ಸೂಕ್ಷ್ಮತೆಗಳ ಜೊತೆಗೆ ಜಾನಪದ ಕಲೆಯ ಸೊಬಗೂ ಮೇಳೈಸಿದೆ.

ಜುಲೈ 12, ಕಮಾಲ್ ಅಹ್ಮದ್ ಅವರ ಜನ್ಮದಿನ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಲಲಿತಕಲೆಯ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಕಲಾ ಸ್ಟುಡಿಯೋ ಗದಗದಲ್ಲಿದೆ. 

ಕಮಾಲ್ ಅವರ ಚಿತ್ರಗಳು ಮುಘಲ್, ರಾಜಪೂತ, ಮತ್ತು ದಕ್ಕಣಿಯ ಮಿನಿಯೆಚರ್ ಶೈಲಿಗಳನ್ನು  ನೆನಪಿಸುವುದರ ಜೊತೆಗೆ ಜಾನಪದ ಮನೋಭಾವ ಮತ್ತು ಸ್ಥಳೀಯತೆಗಳನ್ನು ಬಿಂಬಿಸುತ್ತಿವೆ.  ಇವರು ಜಾನಪದ ಮತ್ತು  ಮಿನಿಯೆಚರ್ ಚಿತ್ರಕಲೆಯ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ.

ಎಂ. ಕಮಾಲ್ ಅಹ್ಮದ್ ಅವರಿಗೆ 2022-23 ಸಾಲಿನ ಕರ್ನಾಟಕ ಲಲಿತ ಅಕಾಡೆಮಿಯ ಗೌರವ ಪ್ರಶಸ್ತಿ, ಗುಲಬರ್ಗಾದ ಮಿನಿ ವಿಧಾನ ಸೌಧದಿಂದ ಸುವರ್ಣ ಪದಕ, ಗದಗದ ಕೆ.ವಿ. ಪರಿಷತ್ತಿನಿಂದ ಪ್ರತಿಭಾ ರತ್ನ ಪ್ರಶಸ್ತಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸಾಂಪ್ರದಾಯಿಕ ಚಿತ್ರಕಲೆಗೆ ನೀಡಿದ ಅರ್ಧ ತೊಲ ಚಿನ್ನದ ಪದಕ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.

ಕಲಾವಿದರಾದ ಎಂ. ಕಮಾಲ್ ಅಹ್ಮದ್  ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Kamalahmed Malekoppa 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ