ಪಂಚ್ಮಿ ಹಬ್ಬಾ
ಪಂಚ್ಮಿ ಹಬ್ಬಾ ಉಳಿತವ್ವ ದಿನ ನಾಕ
ಅಣ್ಣ ಬರಲಿಲ್ಲಾ ಯಾಕೋ ಕರಿಲಾಕ
ನಮ್ಮ ತವರೂರು ಗೋಕುಲ ನಗರಾ
ಮನಿಯೆಂಥಾದ ರಾಜಮಂದಿರಾ
ನಮ್ಮ ಅಣ್ಣಯ್ಯ ದೊಡ್ಡ ಸಾವಕಾರಾ
ಹ್ಯಾಂಗಾದೀತ ತಂಗಿನ್ನ ಮರಿಯಾಕ-
ಅಣ್ಣ ಬರಲಿಲ್ಲ ಯಾಕೋ ಕರಿಲಾಕ..
ನಮ್ಮ ತವರೀಲಿ ಪಂಚಮಿ ಭಾರಿ
ಮಣದ ತುಂಬಾ ಬಟ್ಟಲ ಕೊಬ್ಬರೀ
ಅಳ್ಳು ಅವಲಕ್ಕಿ ತಂಬಿಟ್ಟು ಸೂರಿ
ನಾನೂ ತಿನುವಾಕಿ ಬಂದ್ ಹಾಂಗ ಮನಕ-
ಅಣ್ಣ ಬರಲಿಲ್ಲ ಯಾಕೋ ಕರಿಲಾಕ
ಬೆಟಗೇರಿ ಕೃಷ್ಣಶರ್ಮ
ಕಾಮೆಂಟ್‌ಗಳು