ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಯಂತಿ ಅಯ್ಯಂಗಾರ್

 

ಜಯಂತಿ ಅಯ್ಯಂಗಾರ್

ಜಯಂತಿ ಅಯ್ಯಂಗಾರ್ ವಿದೇಶದಲ್ಲಿ ಭಾರತೀಯ ಸಾಂಸ್ಕೃತಿಕ  ಕಂಪನ್ನು ಪಸರಿಸಿರುವ ಕನ್ನಡ ನಾಡಿನ ವಿಶಿಷ್ಟ‍ ಪ್ರತಿಭೆ.‍

ಜುಲೈ 17, ಜಯಂತಿ ಅವರ ಜನ್ಮದಿನ. ಓದಿ ಬೆಳೆದದ್ದು ಬೆಂಗಳೂರಿನಲ್ಲಿ.  ಸೆಂಟ್ರಲ್ ಕಾಲೇಜಿನಲ್ಲಿ ಓದು ನಡೆಸಿದ ನಂತರಲ್ಲಿ ವೈವಾಹಿಕ ಮತ್ತು ವೃತ್ತಿಪರ ಜೀವನ ಸಾಗಿದ್ದು ಅಮೆರಿಕದ ನೆಲದಲ್ಲಿ.  ಜೀವಶಾಸ್ತ್ರಜ್ಞರಾದ ಅವರ ಸೇವೆ ಅನೇಕ ಪ್ರತಿಷ್ಠಿತ ಸಂಸ್ಥೆಗಳಿಗೆ ಸಂದಿದೆ.

ಸಂಗೀತ, ಸಾಹಿತ್ಯ, ರಂಗಭೂಮಿ ಹೀಗೆ ಜಯಂತಿ ಅವರ ಅಭಿರುಚಿಗಳು ಹಲವಾರು. ಅವರಿಗಿರುವ ಸಂಸ್ಕೃತ, ಕನ್ನಡ, ತಮಿಳು ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿರುವ ಜ್ಞಾನ ಮತ್ತು ಸಾಂಸ್ಕೃತಿಕ ತಿಳುವಳಿಕೆಗಳ ಸುಜ್ಞಾನವೂ ಅಪರಿಮಿತ.  ಹೀಗಾಗಿ ಅವರ ವಿವಿಧ ಭಾಷಾ ಸಂಸ್ಕೃತಿಗಳಲ್ಲಿನ ವಿಡಿಯೊ ಪ್ರಸ್ತುತಿಗಳು ಆಪ್ತವಾಗಿ ಗಮನ ಸೆಳೆಯುತ್ತವೆ.  ಕಳೆದ ಬಾರಿ ತಿರುಪ್ಪಾವೈ ಪ್ರಸ್ತುತ ಪಡಿಸುವಾಗ ಅವರು ನೀಡಿದ ತಿದ್ದುಪಡಿಗಳು ನನಗೆ ಅಪಾರ ಸಂತಸ ಕೊಟ್ಟಿತು.

ಜಯಂತಿ ಅವರು ರಂಭೂಮಿಯಲ್ಲೂ ತಮ್ಮ ಆಸಕ್ತಿ ಪ್ರದರ್ಶಿಸಿದ್ದಾರೆ. ವಿವಿಧ ಪ್ರವಾಸಗಳ ಸಮಯದಲ್ಲಿ ಅವರು ತೋರುತ್ತಿರುವ ವಿಶ್ವ ಪರಿಚಯವೂ ಗಮನಾರ್ಹ.

ಆತ್ಮೀಯರಾದ ಜಯಂತಿ ಅಯ್ಯಂಗಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Jayanthi Iyengar 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ