ಅಕ್ಕಿನೇನಿ ನಾಗಾರ್ಜುನ
ಅಕ್ಕಿನೇನಿ ನಾಗಾರ್ಜುನ
ಅಕ್ಕಿನೇನಿ ನಾಗಾರ್ಜುನ ರಾವ್ ಚಲನಚಿತ್ರ ಕಲಾವಿದ, ನಿರ್ಮಾಪಕ ಮತ್ತು ಉದ್ಯಮಿ. ಪ್ರಮುಖವಾಗಿ ಅವರು ತೆಲುಗು ಚಿತ್ರರಂಗದಲ್ಲಿದ್ದು ಕೆಲವು ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.
ನಾಗಾರ್ಜುನ 1959ರ ಆಗಸ್ಟ್ 29 ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ಮಹಾನ್ ಕಲಾವಿದರಾಗಿ ಪ್ರಸಿದ್ಧರಾದ ಅಕ್ಕಿನೇನಿ ನಾಗೇಶ್ವರ ರಾವ್. ತಾಯಿ ಅನ್ನಪೂರ್ಣ. ಮೂಲತಃ ಇವರ ಕುಟುಂಬದವರು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ರಾಮಪುರಂಗೆ ಸೇರಿದವರು. ನಾಗಾರ್ಜುನ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದ್ದಾರೆ
ನಾಗಾರ್ಜುನ ಅವರು 1989ರಲ್ಲಿ, ಮಣಿರತ್ನಂ ನಿರ್ದೇಶನದ ‘ಗೀತಾಂಜಲಿ’, ಚಿತ್ರದಲ್ಲಿ ನಟಿಸಿದರು. ಇದು ಅತ್ಯುತ್ತಮ ಜನಪ್ರಿಯ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿತು. ಅದೇ ವರ್ಷ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಶಿವಾ' ಎಂಬ ಯಶಸ್ವೀ ಚಿತ್ರದಲ್ಲಿ ನಟಿಸಿದರು. ಇದೇ ಚಿತ್ರದ ರೀಮೇಕ್ ಮೂಲಕ ಹಿಂದಿ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು.
ನಾಗಾರ್ಜುನ ಅವರು ಪ್ರಸಿದ್ಧ ಜೀವನಚರಿತ್ರೆ ಆಧಾರಿತ ಚಲನಚಿತ್ರಗಳಲ್ಲಿನ ಅಭಿನಯದಲ್ಲಿ ಖ್ಯಾತರಾಗಿದ್ದಾರೆ. ಅಣ್ಣಮಾಚಾರ್ಯರ ಕುರಿತಾದ 'ಅನ್ನಮಯ್ಯ' , ಯವಕ್ರಿ (ತಪಸ್ವಿ ಭಾರದ್ವಾಜನ ಮಗ) ಪಾತ್ರದ 'ಅಗ್ನಿವರ್ಷ' , 'ಎಲ್ಓಸಿ: ಕಾರ್ಗಿಲ್' ಚಿತ್ರದಲ್ಲಿನ 'ಮೇಜರ್ ಪದ್ಮಪಾಣಿ ಆಚಾರ್ಯ', ಭದ್ರಾಚಲ ರಾಮದಾಸರ ಕುರಿತಾದ 'ಶ್ರೀ ರಾಮದಾಸು', ಸುದ್ದಲ ಹನ್ಮಂತು ಪಾತ್ರದ 'ರಾಜಣ್ಣ',
ಶಿರಡಿಯ ಸಾಯಿಬಾಬಾ ಕುರಿತ 'ಶಿರಡಿ ಸಾಯಿ', ಚಂಡಾಲ ಪಾತ್ರಧಾರಿಯಾಗಿ 'ಜಗದ್ಗುರು ಆದಿಶಂಕರ', ಹಾಥಿರಾಮ್ ಭಾವಾಜಿ ಪಾತ್ರಧಾರಿಯಾಗಿ 'ಓಂ ನಮೋ ವೆಂಕಟೇಶಾಯ' ಮುಂತಾದ ನಿರ್ವಹಣೆಗಳು ಇವುಗಳಲ್ಲಿ ಸೇರಿವೆ.
ನಾಗಾರ್ಜುನ ಅವರು 90 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು 'ನಿನ್ನೆ ಪೆಲ್ಲಾಡತಾ' ಮತ್ತು 'ಅನ್ನಮಯ್ಯ' ಚಿತ್ರಗಳಿಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹತ್ತು ನಂದಿ ಪ್ರಶಸ್ತಿಗಳು ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2013 ರಲ್ಲಿ, ಅವರು ದೆಹಲಿ ಚಲನಚಿತ್ರೋತ್ಸವದ 100 ವರ್ಷಗಳ ಭಾರತೀಯ ಸಿನಿಮಾ ಆಚರಣೆಯಲ್ಲಿ ದಕ್ಷಿಣ ಭಾರತದ ಸಿನಿಮಾವನ್ನು ಪ್ರತಿನಿಧಿಸಿದರು. 1995 ರಲ್ಲಿ, ಅವರು ಸೀಶೆಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಮಾಣ ಘಟಕದೊಂದಿಗೆ ಚಲನಚಿತ್ರ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ಹಾರ್ಟ್ ಅನಿಮೇಷನ್ ಎಂಬ ಎಮ್ಮಿ ಪ್ರಶಸ್ತಿ ವಿಜೇತ ಚಲನಚಿತ್ರ ಅನಿಮೇಷನ್ ಕಂಪನಿಯ ಸಹ-ನಿರ್ದೇಶಕರಾಗಿದ್ದರು.
ನಾಗಾರ್ಜುನ ಅನ್ನಪೂರ್ಣ ಸ್ಟುಡಿಯೋಸ್‌ನ ಸಹ-ಮಾಲೀಕರಾಗಿದ್ದಾರೆ. ಹೈದರಾಬಾದ್‌ನಲ್ಲಿರುವ ಲಾಭರಹಿತ ಚಲನಚಿತ್ರ ಶಾಲೆಯಾದ ಅನ್ನಪೂರ್ಣ ಕಾಲೇಜ್ ಆಫ್ ಫಿಲ್ಮ್ ಅಂಡ್ ಮೀಡಿಯಾದ ಅಧ್ಯಕ್ಷರಾಗಿದ್ದಾರೆ.
On the birthday of actor Akkineni Nagarjuna 🌷🌷🌷
ಕಾಮೆಂಟ್‌ಗಳು