ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೇಧಾ ವಿದ್ಯಾಭೂಷಣ


 ಮೇಧಾ ವಿದ್ಯಾಭೂಷಣ

ಸಂಗೀತ ಮತ್ತು ಅಭಿನಯ ಕ್ಷೇತ್ರದಲ್ಲಿ ಹೆಸರಾದ ವಿದುಷಿ ಮೇಧಾ ಹಿರಣ್ಮಯಿ ವಿದ್ಯಾಭೂಷಣ ಅವರ ಜನ್ಮದಿನವಿದು.

ಮಹಾನ್ ಗಾಯಕರಾದ ವಿದ್ಯಾಭೂಷಣರ ಸುಪುತ್ರಿಯಾದ ಮೇಧಾ ಚಿಕ್ಕಂದಿನಿಂದಲೇ ಸಂಗೀತವನ್ನು ಉಸಿರಾಗಿಸಿಕೊಂಡು ಬೆಳೆದವರು.  ಇಂಜಿನಿಯರಿಂಗ್ ಓದನ್ನು ನಡೆಸುವುದರ ಜೊತೆಗೆ ಸಂಗೀತದ ವಿದ್ವತ್ ಸಾಧನೆ ಮಾಡಿದರು.  ಕಥಕ್ ನೃತ್ಯ ಕಲಿತರು.  ನೀನಾಸಂ ರಂಗಶಿಬಿರಗಳಲ್ಲಿ ಭಾಗಿಯಾದರು.

ಸಂಗೀತ ಕಾರ್ಯಕ್ರಮ ನೀಡಿಕೆ, ಗಾಯನದ ಅಲ್ಬಮ್ಗಳಲ್ಲಿ ಮೇಧಾ ಕಂಗೊಳಿಸಿದ್ದಾರೆ.  ಟಿ. ಎನ್. ಸೀತಾರಾಮ್ ಅವರ ಧಾರಾವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದಾರೆ. ವಿಶ್ವದಾದ್ಯಂತ ಅವರ ಗಾಯನ ಕಾರ್ಯಕ್ರಮಗಳು ಜನಪ್ರಿಯಗೊಂಡಿವೆ.

ಪ್ರತಿಭಾಶಾಲಿನಿ, ಸಾಧಕಿ ಮೇಧಾ ಹಿರಣ್ಮಯಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 


Happy birthday Medha Vidyabhushan 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ