ಶಶಿಧರ ಕೋಟೆ
ಶಶಿಧರ ಕೋಟೆ
ಶಶಿಧರ ಕೋಟೆ ಹೆಸರಾಂತ ಗಾಯಕರು ಮತ್ತು ಅಭಿನಯ ಕಲಾವಿದರು.
ಶಶಿಧರ ಕೋಟೆ ಅವರು 1965 ರ ಆಗಸ್ಟ್ 21ರಂದು ಮಂಗಳೂರು ಬಳಿಯ ಕಾಳಂಜ ಎಂಬಲ್ಲಿ ಜನಿಸಿದರು. ತಂದೆ ಕೋಟೆ ವಸಂತ್ ಕುಮಾರ್. ತಾಯಿ ಪಾರ್ವತಿ ಕೋಟೆ. ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿರುವ ಇವರು ಕೆಲಕಾಲ ಕಾಲೇಜು ಅಧ್ಯಾಪನವನ್ನು ನಡೆಸಿದರು.
ಸಂಗೀತದಲ್ಲಿ ಆಸಕ್ತಿ ಮೂಡಿಸಿಕೊಂಡ ಶಶಿಧರ ಕೋಟೆ ಅವರು ಸತ್ಯಭಾಮೆ, ಗೋಪಾಲಕೃಷ್ಣ ಅಯ್ಯರ್ ಹಾಗೂ ವಿದ್ವಾನ್ ಗುರುದತ್ ಮುಂತಾದವರಲ್ಲಿ ಸಂಗೀತ ಸಾಧನೆ ಮಾಡಿದರು. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಹಾಡುತ್ತಾರೆ. ಅನೇಕ ಸಹಸ್ರ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 'ಗೀತಚಿತ್ರ’ ಕಾರ್ಯಕ್ರಮದ ಮೂಲಕ ಬಿ ಕೆ ಎಸ್ ವರ್ಮಾ ಅವರ ಚಿತ್ರರಚನೆ ಹಾಗೂ ತಮ್ಮ ಗಾಯನ ಸಂಯೋಗವನ್ನು ಯಶಸ್ವಿಯಾಗಿ ವೇದಿಕೆಯಲ್ಲಿ ತಂದರು.
ಶಶಿಧರ ಕೋಟೆ - ಸೀತಾ ಕೋಟೆ ದಂಪತಿ ಕಿರುತೆರೆಯಲ್ಲಿ ಅಭಿನಯ ಕಲಾವಿದರಾಗಿಯೂ ಹೆಸರಾಗಿದ್ದಾರೆ.
Shashidhar Kote
ಕಾಮೆಂಟ್‌ಗಳು