ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ವಿಜಯರಾಘವನ್



ಎಸ್.ವಿಜಯರಾಘವನ್ ನಮನ


ವೃತ್ತಿಯಲ್ಲಿ ವೈದ್ಯರಾಗಿದ್ದು,  ವೈಣಿಕ ವಿದ್ವಾಂಸರಾಗಿಯೂ ಪ್ರಸಿದ್ಧರಾಗಿದ್ದ ಮೈಸೂರಿನ ವಿದ್ವಾನ್ ಡಾ. ಎಸ್.ವಿಜಯರಾಘವನ್ ಅವರು 2025ರ ಜುಲೈ 28ರಂದು ನಿಧನರಾದ ಸುದ್ದಿ ಬಂದಿದೆ. 

ಡಾ. ಎಸ್. ವಿಜಯರಾಘವನ್ 1947 ವರ್ಷದಲ್ಲಿ ಜನಿಸಿದರು.  ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಡೀನ್ ಮತ್ತು ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾಗಿದ್ದರು. 

ವಿಜಯರಾಘವನ್ ಅವರು ಆಲ್ ಇಂಡಿಯಾ ರೇಡಿಯೋದ 'ಎ-ಟಾಪ್' ಕಲಾವಿದರಾಗಿದ್ದರು. ಅವರ ವೀಣಾ ವಾದನವನ್ನು 'ಸೌತ್ ಝೋನ್ ಹುಕ್ ಅಪ್' ಮತ್ತು ಆಲ್ ಇಂಡಿಯಾ ರೇಡಿಯೋ ರಾಷ್ಟ್ರೀಯ ಜಾಲದಲ್ಲಿ ಪ್ರಸಾರ ಮಾಡಲಾಗಿತ್ತು. 

ವಿಜಯರಾಘವನ್ ಅವರಿಗೆ 2017 ರಲ್ಲಿ ಪ್ರತಿಷ್ಠಿತ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಸಂದಿತ್ತು. ಜೆಎಸ್ಎಸ್ ಸಂಗೀತ ಸಭಾದ 24 ನೇ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಅವರನ್ನು ಆಯ್ಕೆ ಮಾಡಲಾಗಿತ್ತು.  2017 ರಲ್ಲಿ ಅವರಿಗೆ 'ಸಂಗೀತ ವಿದ್ಯಾನಿಧಿ' ಬಿರುದನ್ನು ಸಲ್ಲಿಸಲಾಗಿತ್ತು.

ಅಗಲಿದ ಕಲಾವಿದರಾದ ವಿದ್ವಾನ್ ವಿಜಯರಾಘವನ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ಮೈಸೂರಿನ ಸಂಗೀತಗಾರರು ಮೈಸೂರಿನ ಗಾನಭಾರತಿಯ ಸಹಯೋಗದೊಂದಿಗೆ 2025ರ ಆಗಸ್ಟ್ 18ರಂದು ಸಂಗೀತ ರೂಪದ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ನಾನು ಮೈಸೂರಿನಲ್ಲಿದ್ದ ದಿನಗಳಲ್ಲಿ ನನ್ನ ಗೆಳೆಯರ ಬಂಧುವಾಗಿದ್ದ ಡಾ. ವಿಜಯರಾಘವನ್ ಅವರು  ನನಗೂ ಆಪ್ತರಾಗಿದ್ದರು.

ಅಗಲಿದ ಸಹೃದಯಿ ವೈದ್ಯರೂ, ಪ್ತಾಧ್ಯಾಪಕರೂ, ವೈಣಿಕರೂ ಆದ ವಿಜಯರಾಘವನ್ ಅವರ ಚೇತನಕ್ಕೆ ಆಪ್ತ ನಮನಗಳು.

Respects to departed soul, Doctor by Profession and Veena Artiste Vidwan Dr. S. Vijayaraghavan 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ