ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಲಾ ಶಶಿಕಾಂತ್


 ಮಾಲಾ ಶಶಿಕಾಂತ್ 

ಡಾ. ಮಾಲಾ ಶಶಿಕಾಂತ್ ಅವರು ಪ್ರಸಿದ್ಧ ನೃತ್ಯ ಕಲಾವಿದೆ, ನೃತ್ಯ ಗುರು  ಮತ್ತು ‘ಕೈಶಿಕಿ ನಾಟ್ಯವಾಹಿನಿ’ ಸಂಸ್ಥೆಯ ಸಂಸ್ಥಾಪಕರು. 

ಸೆಪ್ಟೆಂಬರ್ 17, ಮಾಲಾ ಅವರ ಜನ್ಮದಿನ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ಪರಂಪರೆಯ ಕುರಿತಾದ ಸಂಶೋಧನಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಗೌರವ ಗಳಿಸಿದ್ದಾರೆ.

ಗುರು ನಾಟ್ಯಾಚಾರ್ಯ ವಿ. ಎಸ್. ಕೌಶಿಕ್ ಅವರ ಶಿಷ್ಯೆಯಾದ ಮಾಲಾ ಅವರು ನಾಟ್ಯ, ಯೋಗ, ಸಂಗೀತ ಮತ್ತು ಸಂಸ್ಕೃತ ಅಧ್ಯಯನ ಕ್ಷೇತ್ರಗಳಲ್ಲಿ ಮಾಡಿರುವೆ ಸಾಧನೆಗಳು ಹಿರಿದಾದದ್ದು. ಇವರ ಪತಿ ವೈಣಿಕ ವಿದ್ವಾನ್ ಶಶಿಕಾಂತ್ ಅವರು ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರ ಶಿಷ್ಯರು. 

ಮಾಲಾ ಅವರು ಕಥಕ್ಕಳಿ ನೃತ್ಯಕಲಾವಿದೆಯಾಗಿ ಕಳೆದ ನಾಲ್ಕು ದಶಕಗಳಲ್ಲಿ ವಿಶ್ವದಾದ್ಯಂತ ಹೆಸರಾಗಿದ್ದಾರೆ.  ಇವರು "ಪರಂಪರಾಧಾರ" ಎಂಬ ಕೃತಿಯ ಕರ್ತೃವಾಗಿದ್ದಾರೆ. 1989 ರಲ್ಲಿ ಕೈಶಿಕಿ ನಾಟ್ಯವಾಹಿನಿ ಸಂಸ್ಥೆಯನ್ನು ಸ್ಥಾಪಿಸಿದ ಇವರು ಅನೇಕ ಪ್ರತಿಭಾನ್ವಿತ ಶಿಷ್ಯರನ್ನು ಪ್ರಖ್ಯಾತ ಕಲಾವಿದರಾಗಿ ರೂಪಿಸಿದ್ದಾರೆ. ಇವರು 'ಕರ್ನಾಟಕ ಭರತಾಗಮ ಪ್ರತಿಷ್ಠಾನ'ದ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.

ಡಾ. ಮಾಲಾ ಶಶಿಕಾಂತ್ ಅವರಿಗೆ ಕರ್ನಾಟಕ ಕಲಾಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಸಾಧಕರಾದ ಡಾ. ಮಾಲಾ ಶಶಿಕಾಂತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Dr. Mala Shashikanth 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ