ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಜೀವ ಜಹಾಗೀರದಾರ


 ಸಂಜೀವ ಜಹಾಗೀರದಾರ ನಿಧನ


ಭೀಮಸೇನ ಜೋಶಿ ಅವರ ಶಿಷ್ಯರಾಗಿದ್ದ ಹಿಂದೂಸ್ಥಾನಿ ಗಾಯಕ ಸಂಜೀವ ಜಹಾಗೀರದಾರ 2025ರ ಅಕ್ಟೋಬರ್ 20ರಂದು ಪುಣೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. 

ಸಂಜೀವ ಜಹಾಗೀರದಾರ 1960ರ ಅಕ್ಟೋಬರ್ 21ರಂದು ಜನಿಸಿದರು. ಅವರು ಅವಿಭಜಿತ ವಿಜಯಪುರ ಜಿಲ್ಲೆಯ ಇಳಕಲ್ ಸಮೀಪದ ಬಲಕುಂದಿ ಗ್ರಾಮದವರು. ಅವರ ಮನೆಯಲ್ಲಿ ಪ್ರತಿ ಗುರುವಾರ ಭಜನೆ ಕಾರ್ಯಕ್ರಮ ನಡೆಯುತ್ತಿತ್ತು. ಹೀಗಾಗಿ ಅವರ ಮನೆತನಕ್ಕೆ ಭಜನಿ ಜಹಾಗೀರದಾರ ಹೆಸರು ಬಂತು. ವಿಜಯಪುರದ ಸಂಗೀತ ಶಿಕ್ಷಕ ಕೇಶವರಾವ ಥಿಟೆ ಅವರ ಬಳಿ ಪ್ರಾಥಮಿಕ ಹಂತದ ಸಂಗಿತವನ್ನು ಕಲಿತರು.  ಪದವಿಪೂರ್ವ ಶಿಕ್ಷಣವನ್ನು ವಿಜಯಪುರದಲ್ಲಿ ನಡೆಸಿದ ಸಂಜೀವ ಅವರು ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಕಲಬುರ್ಗಿಯಲ್ಲಿ ನಡೆಸಿದರು. 

ಸಂಜೀವ ಜಹಾಗೀರದಾರ ಅವರು ಶಿಕ್ಷಣ ಪೂರೈಸಿದ ಬಳಿಕ ಪಂಡಿತ ಭೀಮಸೇನ ಜೋಶಿ ಅವರ ಮನೆಯಲ್ಲಿ 12 ವರ್ಷ ಇದ್ದು, ಗುರುಶಿಷ್ಯ ಪರಂಪರೆಯಲ್ಲಿ ಸಂಗೀತ ಸಾಧನೆ ಮಾಡಿದರು.  ದೇಶವಿದೇಶಗಳ ವಿವಿಧೆಡೆ  ವ್ಯಾಪಕವಾಗಿ ತಮ್ಮ ಗಾನಸುಧೆ ಹರಿಸಿ ಹೆಸರಾಗಿದ್ದರು.

ಅಗಲಿದ ಸಂಗೀತ ಚೇತನಕ್ಕೆ ನಮನ. 

Respects to departed soul Pandit Sanjeev jahagirdhar 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ