ರಾಜೇಂದ್ರ ನಾಕೋಡ್
ರಾಜೇಂದ್ರ ನಾಕೋಡ್
ರಾಜೇಂದ್ರ ನಾಕೋಡ್ ಅವರು ಹೆಸರಾಂತ ತಬಲಾ ವಾದಕರು.
1969ರ ಅಕ್ಟೋಬರ್ 10 ರಂದು ಜನಿಸಿದ ರಾಜೇಂದ್ರ ನಾಕೋಡ್, ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರ ಕುಟುಂಬದಿಂದ ಬಂದವರು. ಅವರ ತಂದೆ ಪಂಡಿತ್ ಅರ್ಜುನ್ಸಾ ನಾಕೋಡ್ ಹೆಸರಾಂತ ಗಾಯನ ಕಲಾವಿದರು. ರಾಜೇಂದ್ರ ನಾಕೋಡ್ ಅವರು ತಮ್ಮ ತಂದೆಯವರಿಂದ ಆರಂಭಿಕ ತರಬೇತಿಯನ್ನು ಪಡೆದರು. ನಂತರ ಅವರ ಸಹೋದರರಾದ ಪಂಡಿತ್ ರಘುನಾಥ್ ನಾಕೋಡ್ ಮತ್ತು ವಿಶ್ವನಾಥ್ ನಾಕೋಡ್ ಅವರಿಂದ ತರಬೇತಿ ಪಡೆದರು. ಈ ಇಬ್ಬರೂ ಅತ್ಯುತ್ತಮ ತಬಲಾ ವಾದಕರು.
ರಾಜೇಂದ್ರ ನಾಕೋಡ್ ಅವರು ಆಲ್ ಇಂಡಿಯಾ ರೇಡಿಯೋದಿಂದ "ಎ" ಗ್ರೇಡ್ ಮಾನ್ಯತೆ ಪಡೆದವರು. ಅವರು ಸವಾಯಿ ಗಂಧರ್ವ ಪುಣ್ಯತಿಥಿ ಮತ್ತು ದೆಹಲಿ ಅಂತರರಾಷ್ಟ್ರೀಯ ಸಂಗೀತ ಉತ್ಸವ ಸೇರಿದಂತೆ ಅನೇಕ ಗೌರವಾನ್ವಿತ ಶಾಸ್ತ್ರೀಯ ಸಂಗೀತ ಉತ್ಸವಗಳಲ್ಲಿ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಪಂಡಿತ್ ಬಸವರಾಜ ರಾಜಗುರು, ಬೇಗಂ ಪರ್ವೀನ್ ಸುಲ್ತಾನ, ಪಂಡಿತ್ ವಿಶ್ವ ಮೋಹನ್ ಭಟ್, ಕದ್ರಿ ಗೋಪಾಲನಾಥ್, ಉಸ್ತಾದ್ ರಫೀಕ್ ಖಾನ್, ಸೇರಿದಂತೆ ಹಲವು ತಲೆಮಾರಿನ ಪ್ರಸಿದ್ಧ ಕಲಾವಿದರಿಗೆ ತಬಲಾ ಸಹಯೋಗ ನೀಡಿದ್ದಾರೆ. ಡ್ರಮ್ಸ್ ಶಿವಮಣಿ ಮುಂತಾದ ಪ್ರಸಿದ್ಧ ಸಂಗೀತಗಾರರೊಂದಿಗೂ ಪಾಲ್ಗೊಂಡಿದ್ದಾರೆ. ಸೋಲೋ ತಬಲಾ ಕಾರ್ಯಕ್ರಮಗಳಿಗೂ ಹೆಸರಾಗಿದ್ದಾರೆ.
ತಬಲಾ ವಾದನಕ್ಕಾಗಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡಿದ್ದಾರೆ.
"ಭಕ್ತಿ ತಾಳಸೂದನ್" ಪ್ರಶಸ್ತಿ, "ತಾಳ ಮಾರ್ತಾಂಡ", "ಸಂಗೀತ ಶ್ರೀ" ಮತ್ತು "ಲೆಫ್ಟಿನೆಂಟ್ ಪಂಡಿತ್ ರವಿ ಕೂಡ್ಲಗಿ" ಪ್ರಶಸ್ತಿಗಳಂತಹ ಅನೇಕ ಗೌರವಗಳನ್ನು ಗಳಿಸಿದ್ದಾರೆ. ಸಂಗೀತ ಕಾರ್ಯಕ್ರಮಗಳು ಮಾತ್ರವಲ್ಲದೆ, ಪ್ರದರ್ಶನಗಳು, ರೆಕಾರ್ಡಿಂಗ್‌ಗಳು ಮತ್ತು ಬೋಧನೆಗಳಿಗೂ ಸಮಯ ವಿನಿಯೋಗಿಸುತ್ತ ಬಂದಿದ್ದಾರೆ.
ರಾಜೇಂದ್ರ ನಾಕೋಡ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to Great Tabla Artiste Rajendra Nakod 🌷🌷🌷

ಕಾಮೆಂಟ್‌ಗಳು