ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್‌. ಷಡಕ್ಷರಿ


 ಎಸ್‌. ಷಡಕ್ಷರಿ

Happy birthday to Great Enterpreneur, Great motivator, coloumnist, writer and simple to the core Shadakshari S Sir 🌷🙏🌷

ಎಸ್. ಷಡಕ್ಷರಿ ಅಂದರೆ ನಸುನಗುತ್ತ ಮಾತನಾಡುವ ಸಹೃದಯಿ.  ಈ ಸರಳ ಸಹೃದಯಿ, ರಮಣಶ್ರೀ ಹೋಟೆಲ್ ಮತ್ತು ಸಮೂಹ ಉದ್ಯಮದ ಮುಖ್ಯಸ್ಥರು.    

ಷಡಕ್ಷರಿ ಅವರು ಎರಡು ದಶಕಗಳ ಹಿಂದೆ ಮಕ್ಕಳಿಗಾಗಿ ವ್ಯಕ್ತಿ ವಿಕಸನ ಶಿಬಿರ ಮಾಡತೊಡಗಿದಾಗ, ಆ ವ್ಯಕ್ತಿವಿಕಸನ ಶಿಬಿರಕ್ಕೆ ಒಮ್ಮೆ ಮುಖ್ಯ ಅತಿಥಿಗಳಾಗಿ ಬಂದವರು ಅಂದಿನ ವಿಜಯಕರ್ನಾಟಕದ ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರು.  ಎಲ್ಲೆಲ್ಲೂ ಪ್ರತಿಭೆಯನ್ನರಸುವ ಭಟ್ಟರಿಗೆ ಷಡಕ್ಷರಿ ಅವರು ವ್ಯಕ್ತಿ ವಿಕಸನದ ಶಿಬಿರ ನಡೆಸುವ ರೀತಿ ಆಪ್ತವೆನಿಸಿ, ಆ ವಿಷಯಗಳನ್ನೇ ವಿಜಯ ಕರ್ನಾಟಕಕ್ಕೆ ಅಂಕಣ ಬರೆಯಲು ಪ್ರೇರೇಪಿಸಿದರು.  ಮುಂದೆ ನಡೆದದ್ದು ಇತಿಹಾಸ.   ಈ ಅಂಕಣಕ್ಕೆ ಪ್ರೊ. ಎಂ. ಕೃಷ್ಣೇಗೌಡರು ಇಟ್ಟ ಹೆಸರು 'ಕ್ಷಣ ಹೊತ್ತು ಆಣಿ ಮುತ್ತು'.  ಆ ಅಂಕಣ ವಿಶ್ವದಾದ್ಯಂತ ವ್ಯಾಪಿಸಿರುವ ಕನ್ನಡಿಗರನ್ನೂ ಹಿರಿಯ ಕಿರಿಯರೆನ್ನದೆ ಎಲ್ಲರನ್ನೂ ಅಪಾರವಾಗಿ ಸೆಳೆಯುತ್ತ ಬಂತು. ಎಲ್ಲರಿಗೂ ಸುಲಭವಾಗಿ ಗ್ರಾಹ್ಯವಾಗುವಂತೆ ಪುಟ್ಟ ನವಿರಾದ ನೀತಿ ಕತೆಗಳೊಂದಿಗೆ ಬಂದ ಈ ಕ್ಷಣ ಹೊತ್ತಿನ ಆಣಿ ಮುತ್ತುಗಳು ಕನ್ನಡಿಗರಿಗೆ ನಿರಂತರ ರಸಧಾರೆಯಾಗಿ ಅಪ್ಯಾಯಮಾನವೆನಿಸಿವೆ. ಇದುವರೆಗೆ 14 ಸಂಪುಟಗಳಲ್ಲಿ ಪುಸ್ತಕಗಳಾಗಿಯೂ ಬಂದಿರುವ 'ಕ್ಷಣ ಹೊತ್ತು ಆಣಿ ಮುತ್ತು'ಗಳ ಪ್ರತಿ ಸಂಕಲನಗಳು ಅನೇಕ  ಬಾರಿ ಮರುಮುದ್ರಣಗಳನ್ನು ಕಂಡು ಹಲವು ಲಕ್ಷಾಂತರ ಪ್ರತಿಗಳಾಗಿ ಕನ್ನಡಿಗರ ಮನೆ ಮನೆಗಳನ್ನು ತಲುಪಿವೆ.

ಉದ್ಯಮಿಯಾಗಿರುವ ಷಡಕ್ಷರಿ ಅವರೊಡನೆ ಇದ್ದು ಅವರ ಸವಿ ಮಾತು ಕೇಳುವುದು, ಅವರು ಬರೆದದ್ದನ್ನು ಓದುವುದು, ಅವರ ಮಂದಹಾಸ ಮೂಡಿಸುವ ನವಿರು ಹಾಸ್ಯೋಲ್ಲಾಸದ ಮಾತುಗಳನ್ನು ಕೇಳುವುದು ಸುಕೃತವೆನಿಸುತ್ತದೆ.

 ಪೂಜ್ಯ ಎಸ್. ಷಡಕ್ಷರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ