ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಲಾ ಸಿನ್ಹಾ


 ಮಾಲಾ ಸಿನ್ಹಾ


ಮಾಲಾ ಸಿನ್ಹಾ ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿ ಹೆಸರಾಗಿದ್ದ ಸೌಂದರ್ಯಯುತ ನಟಿ.

ಮಾಲಾ ಸಿನ್ಹಾ ಅವರು 1936ರ ನವೆಂಬರ್ 11ರಂದು ಕೊಲ್ಕೊತ್ತಾದಲ್ಲಿ ಜನಿಸಿದರು 

ಮಾಲಾ ಸಿನ್ಹಾ ಅವರು ನಾಲ್ಕು ದಶಕಗಳ ತಮ್ಮ  ವೃತ್ತಿಜೀವನದಲ್ಲಿ, ಗುರುದತ್ ಅವರ ಪ್ಯಾಸಾ (1957) ಮತ್ತು ಯಶ್ ಚೋಪ್ರಾ ಅವರ ಧೂಲ್ ಕಾ ಫೂಲ್ (1959) ನಂತಹ ಚಲನಚಿತ್ರಗಳೊಂದಿಗೆ ಪ್ರಸಿದ್ಧಿ ಪಡೆದರು. ನಂತರ, ಅವರು ಫಿರ್ ಸುಬಹ್ ಹೋಗಿ (1958), ಹರಿಯಾಲಿ ಔರ್ ರಸ್ತಾ , ಅನ್ಪಡ್ (ಎರಡೂ 1962), ದಿಲ್ ತೇರಾ ದೀವಾನಾ (1962), ಗುಮ್ರಾ , ಬಹುರಾಣಿ (ಎರಡೂ 1963), ಹಿಮಾಲಯನ್ ಕಿ ಗೋದ್ ಮೇ (1965) , ಆಸ್ರಾ (1966), ಮರ್ಯಾದಾ (1971). ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದರು.  ಅವರು ಅನೇಕ ಚಿತ್ರಗಳಲ್ಲಿ ಉತ್ತಮ್ ಕುಮಾರ್, ಕಿಶೋರ್ ಕುಮಾರ್ , ದೇವಾನಂದ್ ಧರ್ಮೇಂದ್ರ , ರಾಜ್‍ಕುಮಾರ್ , ರಾಜೇಂದ್ರ ಕುಮಾರ್ , ಬಿಸ್ವಜೀತ್ , ಮನೋಜ್ ಕುಮಾರ್ , ರಾಜೇಶ್ ಖನ್ನಾ ಅವರೊಂದಿಗೆ ನಟಿಸಿದರು.

On the birthday of popular actress Mala Sinha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ