ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕವಿತಾ ಭಟ್


 ಕವಿತಾ ಭಟ್


ಕುಮಟಾದ ಕವಿತಾ ಭಟ್ ಅವರು ಸಾಹಿತ್ಯ- ಸಂಗೀತ - ಕಲೆ - ಸಂಸ್ಕೃತಿ - ಸಾಹಸ ಸದಭಿರುಚಿಗಳುಳ್ಳ ಅನುಪಮ ಗುಣ ಸಂಗಮರು.  ಪತ್ರಿಕೆಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಉಲ್ಲಾಸಕರ ಬರವಣಿಗೆಗಳನ್ನು ಮೂಡಿಸುತ್ತಿರುವ ಇವರು ವೀಣಾ ವಾದಕರಾಗಿ ಸಂಗೀತದ ಆರಾಧಕರು.  ಸೈಕಲ್ ಸವಾರಿಯನ್ನು ಪ್ರೀತಿಸುತ್ತಿರುವ ಇವರು ನಿರಂತರವಾಗಿ 40 - 50 ಕಿಲೋ ಮೀಟರ್ ಕ್ರಮಿಸುವ ಉತ್ಸಾಹಶಾಲಿ.  ಚಿತ್ರಕಲೆಯಲ್ಲೂ ಇವರ ಸಾಧನೆಯಿದೆ. ಪ್ರಕೃತಿ ಪ್ರಿಯರಾದ ಇವರಲ್ಲಿ  ಚಾರಣದ ಹವ್ಯಾಸವೂ ಕಾಣುತ್ತದೆ.

ಗೃಹಿಣಿಯಾಗಿ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಬದುಕಿನ್ನು ವಿವಿಧ ಹವ್ಯಾಸಗಳ ನೆಲೆಯಲ್ಲಿ ಪ್ರೀತಿಯಿಂದ ಕಾಣುತ್ತಿರುವ ಕವಿತಾ ಅವರ ನಡೆ ಮೆಚ್ಚುಗೆ ಮೂಡಿಸುವಂತದ್ದಾಗಿದೆ.

ಆತ್ಮೀಯ ಕ್ರಿಯಾಶೀಲ ಉತ್ಸಾಹಿ ಕವಿತಾ ಭಟ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

Happy birthday Kavitha Bhat 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ