ವಿಭಾ ಪುರೋಹಿತ
ವಿಭಾ ಪುರೋಹಿತ
ವಿಭಾ ಪುರೋಹಿತ ಅವರು ಕವಯತ್ರಿಯಾಗಿ, ನಿರೂಪಕಿಯಾಗಿ, ಉದ್ಘೋಷಕಿಯಾಗಿ, ಹೀಗೆ ಬಹುಮುಖಿಯಾಗಿ ಸಕ್ರಿಯರಾಗಿದ್ದಾರೆ.
ವಿಭಾ ಪುರೋಹಿತ ಅವರು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು ಕನ್ನಡತೇರರಿಗೆ ಕನ್ನಡ ಕಲಿಕಾ ತರಬೇತಿ ನೀಡುತ್ತಿದ್ದಾರೆ. ಚಂದನ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿ ಮತ್ತು ಹಾಸನದ ಎಫ್.ಎಂ. ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ.
ಕವನ - ಪ್ರಬಂಧ ಬರೆಯುವುದು, ಅನುವಾದ ಮಾಡುವುದು, ಪುಸ್ತಕ ವಿಮರ್ಶೆ ವಿಭಾ ಪುರೋಹಿತ ಅವರ ಹವ್ಯಾಸ. ಇವರ ಬಹುಮುಖಿ ಬರಹಗಳು ನಿಯತಕಾಲಿಕಗಳಲ್ಲಿ ಶೋಭಿಸಿವೆ. 'ಮಲ್ಲಿಗೆ ಮತ್ತು ಇತರೆ ಕವಿತೆಗಳು' 'ದೀಪ ಹಚ್ಚು', 'ಕಲ್ಲೆದೆ ಬಿರಿದಾಗ' ಇವರ ಕವನಸಂಕಲನಗಳಲ್ಲಿ ಸೇರಿವೆ.
ವಿಭಾ ಪುರೋಹಿತ ಅವರು ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಸೇರಿದಂತೆ ರಾಜ್ಯ ಹಲವಾರು ಕನ್ನಡ ಪರ ಮತ್ತು ಸಾಹಿತ್ಯಕ ಸಂಘ ಸಂಸ್ಥೆಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ವೇದಿಕೆಗಳಲ್ಲಿ ಕಾವ್ಯ ಮತ್ತು ವಿಚಾರ ಪ್ರಸ್ತುತಿ ಮಾಡಿದ್ದಾರೆ.
ವಿಭಾ ಪುರೋಹಿತ ಅವರಿಗೆ 'ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ' ಮತ್ತು ಹುಬ್ಬಳ್ಳಿಯ ಚೇತನ ಸಾಹಿತ್ಯ ಪ್ರಕಾಶನದ 'ಚೇತನ ಸಾಹಿತ್ಯ ಸಮ್ಯಾನ್' ಸೇರಿದಂತೆ ಹಲವು ಗೌರವಗಳು ಸಂದಿವೆ.
ವಿಭಾ ಪುರೋಹಿತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Vibha Purohit

ಕಾಮೆಂಟ್‌ಗಳು