ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಧಾ ವಿಶ್ವನಾಥನ್


 ರಾಧಾ ವಿಶ್ವನಾಥನ್ 


ಭಾರತ ರತ್ನ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಸುಪುತ್ರಿಯಾಗಿ ಹಾಗೂ ಅವರ ಸಹಗಾಯಕಿಯಾಗಿ ಶೋಭಿಸಿದವರು ವಿದುಷಿ ರಾಧಾ ವಿಶ್ವನಾಥನ್. 

ರಾಧಾ ಅವರು 1934ರ ಡಿಸೆಂಬರ್ 11ರಂದು ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂನಲ್ಲಿ ಜನಿಸಿದರು.  ಇವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತ ಕಲ್ಕಿ ಸದಾಶಿವಂ ಹಾಗೂ  ಸಂಗೀತ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ ದಂಪತಿಯ ಸುಪುತ್ರಿ.

ರಾಧಾ ಅವರು ಐದು ವರ್ಷ ವಯಸ್ಸಿನಿಂದಲೂ ತಮ್ಮ ತಾಯಿ ಸುಬ್ಬುಲಕ್ಷ್ಮಿ ಅವರೊಂದಿಗೆ ವೇದಿಕೆಯಲ್ಲಿ ಹಾಡತೊಡಗಿದರು. ಇವರು ಭರತನಾಟ್ಯವನ್ನೂ ಕಲಿತು 1945 ರಲ್ಲಿ ರಂಗಪ್ರವೇಶ ಮಾಡಿದರು. 21 ನೇ ವಯಸ್ಸಿನಲ್ಲಿ, ಗಾಯನದ ಮೇಲೆ ಮಾತ್ರ ಗಮನಹರಿಸಲು ರಾಧಾ ನೃತ್ಯವನ್ನು ತ್ಯಜಿಸಿದರು. ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕೃತಿಗಳನ್ನು ಕಲಿತರಲ್ಲದೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿಯೂ ತರಬೇತಿ ಪಡೆದರು. 

ರಾಧಾ ಅವರು ಗುರುಸ್ವಾಮಿ ವಿಶ್ವನಾಥನ್ ಅವರನ್ನು ವಿವಾಹವಾದರು.   ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. 

ರಾಧಾ ಅವರು 83 ನೇ ವಯಸ್ಸಿನಲ್ಲಿ, ರಾಧಾ 2018 ರ ಜನವರಿ 2ರಂದು ಬೆಂಗಳೂರಿನಲ್ಲಿ ನಿಧನರಾದರು.

On Rememberance Day of musician Vidushi Radha Viswanathan 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ