ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನರಸಿಂಹ ಜೋಶಿ


 ನರಸಿಂಹ ಜೋಶಿ


ನರಸಿಂಹ ಜೋಶಿ ಅವರು ಗ್ವಾಲಿಯರ್ ಮತ್ತು ಕಿರಾಣಾ ಘರಾನಾಗಳಿಗೆ ಸೇರಿದ ಯುವ ಹಿಂದೂಸ್ತಾನಿ ಗಾಯಕರಾಗಿ ಖ್ಯಾತರಾಗಿದ್ದಾರೆ. 

ಜನವರಿ 2 ನರಸಿಂಹ ಜೋಶಿ ಅವರ ಜನ್ಮದಿನ.  ಜೋಶಿ ಅವರು ಕರ್ನಾಟಕದ ಪಶ್ಚಿಮ ಘಟ್ಟಗಳ  ಸೋಂದಾ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಕೇಶವ ಜೋಶಿ ಅವರು ಯಕ್ಷಗಾನ ಕಲಾವಿದರು.   ತಾಯಿ ಕುಸುಮಾ ಜೋಶಿ ಅವರು ಮನೆಯಲ್ಲಿ ದಿನನಿತ್ಯದಲ್ಲಿ ಭಜನೆಗಳನ್ನು ಹಾಡುತ್ತಿದ್ದುದು, ಜೋಶಿ ಸಂಗೀತದತ್ತ ಆಕರ್ಷಿತರಾಗಲು ಪ್ರಾಥಮಿಕ ವಾತಾವರಣವಾಯಿತು. 

ಪದ್ಮಭೂಷಣ ಪಂಡಿತ್ ಬಸವರಾಜ ರಾಜಗುರು ಅವರ ಹಿರಿಯ ಶಿಷ್ಯರಾದ ಪಂಡಿತ್ ಶ್ರೀಪಾದ ಹೆಗ್ಡೆ ಅವರ ಅಡಿಯಲ್ಲಿ ಜೋಶಿ ಅವರು ತಮ್ಮ ಹಿಂದೂಸ್ತಾನಿ ಸಂಗೀತ ತರಬೇತಿಯನ್ನು ಪ್ರಾರಂಭಿಸಿದರು. ಗುರು-ಶಿಷ್ಯ ಪರಂಪರೆಯಲ್ಲಿ ಪಡೆದ 15 ವರ್ಷಗಳ ತರಬೇತಿಯು ಅವರ ಪ್ರತಿಭೆಗೆ ಅಗಾಧ ಬೆಂಬಲವನ್ನು ನೀಡಿತು.   ಹೀಗೆ ಜೋಶಿ ಖಯಾಲ್, ತರಾನಾ, ತುಮ್ರಿ ಮತ್ತು ಲಘು ಶಾಸ್ತ್ರೀಯ ಪ್ರಭೇದಗಳಲ್ಲಿ ಭರವಸೆಯ ಗಾಯಕರಾಗಿ ಹೊರಹೊಮ್ಮಿದರು.  ನಂತರ ಅವರು ವಿಶಿಷ್ಟ ಗ್ವಾಲಿಯರ್ ಘರಾನಾ ತರಬೇತಿಗಾಗಿ ಶಿರ್ಸಿಯ ಪಂಡಿತ್ ಎಂ.ಪಿ.ಹೆಗ್ಡೆ ಅವರ ಶಿಷ್ಯರಾದರು. 20 ವರ್ಷಗಳಿಗೂ ಹೆಚ್ಚಿನ ಕಲಿಕೆಯು ಅವರಲ್ಲಿ ಉತ್ತಮ ಕೌಶಲ್ಯಗಳನ್ನು ರೂಪಿಸಿತು.


ಜೋಶಿ ಅವರು ಆಲ್ ಇಂಡಿಯಾ ರೇಡಿಯೋದ ಬಿ. ಟಾಪ್ ಗ್ರೇಡ್ ಕಲಾವಿದರಾಗಿದ್ದು,  ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿವಿಧ ವೇದಿಕೆಗಳು, ರೇಡಿಯೋ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಾಂಪ್ರದಾಯಿಕ ಕಲಿಕೆಯ ಪರಂಪರೆಯನ್ನು ಮುಂದುವರಿಸಲು ಪ್ರೀತಿಯಿಂದ ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಚಾರಕ್ಕಾಗಿ ಮತ್ತು ಶಾಸ್ತ್ರೀಯ ಸಂಗೀತದ ಯುವ ಪೀಳಿಗೆಯನ್ನು ಬೆಂಬಲಿಸಲು ನರಸಿಂಹ ಜೋಶಿ ಅವರು ಗುರು ಪದ್ಮಭೂಷಣ ಬಸವರಾಜ ರಾಜಗುರು ಅವರ ಸ್ಮರಣಾರ್ಥ ವಾರ್ಷಿಕ ಸಂಗೀತ ಕಚೇರಿಯನ್ನು ನಡೆಸುತ್ತ ಬಂದಿದ್ದಾರೆ.

ಸಂಗೀತ ಸಾಧಕರಾದ ನರಸಿಂಹ ಜೋಶಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

On the birthday of Hindustani Vocalist Narasimha Joshi 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ