ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರ್ಷ ಭೋಗ್ಲೆ

 ಹರ್ಷ ಭೋಗ್ಲೆ


ಹರ್ಷ ಭೋಗ್ಲೆ ವಿಶ್ವಪ್ರಸಿದ್ಧ ಕ್ರಿಕೆಟ್ ಲೋಕದ ತೇಜಃಪೂರ್ಣ ವ್ಯಕ್ತಿತ್ವದ ವಿಶ್ಲೇಷಣೆಕಾರ, ವೀಕ್ಷಕ ವಿವರಣೆಗಾರ, ನಿರೂಪಕ, ಸಂದರ್ಶಕ, ಬರಹಗಾರ.

ಹರ್ಷ ಭೋಗ್ಲೆ 1961ರ ಜುಲೈ 19ರಂದು ಹೈದರಾಬಾದಿನಲ್ಲಿ ಜನಿಸಿದರು. ಅಪ್ಪ ಅಚ್ಯುತ ಡಿ.ಭೋಗ್ಲೆ ಫ್ರೆಂಚ್ ಪ್ರಾಧ್ಯಾಪಕರು. ತಾಯಿ ಶಾಲಿನಿ ಭೋಗ್ಲೆ ಮನಃಶಾಸ್ತ್ರ ಪ್ರಾಧ್ಯಾಪಕರು. ಹರ್ಷ ಅವರು ಒಸ್ಮಾನಿಯಾ ವಿದ್ಯಾಲಯದಿಂದ ಬಿ.ಟೆಕ್ ಮತ್ತು ಐಐಎಮ್ ಇಂದ ಎಂಬಿಯ ಪಡೆದರು.  

ಹರ್ಷ ಭೋಗ್ಲೆ 'ಎ' ಡಿವಿಷನ್ ಕ್ರಿಕೆಟ್ ಆಡಿ ಒಸ್ಮಾನಿಯಾ ವಿಶ್ವವಿದ್ಯಾಲಯದ ಪರ ಆಡಿದರು. 19ನೆಯ ವಯಸ್ಸಿನಲ್ಲಿ ಆಕಾಶವಾಣಿಗೆ ವೀಕ್ಷಕ ವಿವರಣೆ ನೀಡಿದರು. 1991-92 ರಲ್ಲಿ ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಇಂದ ವೀಕ್ಷಕ ವಿವರಣೆಗೆ ಆಹ್ವಾನಿಸಲ್ಪಟ್ಟ ಪ್ರಥಮ ಭಾರತೀಯರಾದರು.  ಮುಂದೆ ಅವರು ಭಾರತೀಯ ಕ್ರಿಕೆಟ್ ಬೆಳವಣಿಗೆಯ ಅಗಾಧತೆಯೊಂದಿಗೆ ತಾವೂ ಬೆಳೆದಿದ್ದು ತಮ್ಮ ಪ್ರಸಿದ್ಧಿಯನ್ನು ನಿರಂತರ ವಿಸ್ತರಿಸುತ್ತಲೇ ಇದ್ದಾರೆ.

ಹರ್ಷ ಭೋಗ್ಲೆ ಅವರ ವಾಗ್ಮೀಯತೆ, ಪ್ರಸನ್ನತೆ, ಆಟಗಾರರೊಂದಿಗೆ ತೋರುವ ಗೌರವಯುತ ಆಪ್ತತೆ, ಕೊಂಕು ಅಗೌರವಗಳಿಗೆ ಎಡೆಕೊಡದ ವಿಶ್ಲೇಷಣೆ ಮತ್ತು ವಿಮರ್ಶೆ ಸಂತೋಷ ಕೊಡುತ್ತದೆ.  ಅವರ ಮಾತು ಕೇಳಬೇಕು ಎಂದು ಟಿವಿಯಲ್ಲಿ ಕ್ರಿಕೆಟ್ ನೋಡಬೇಕೆನಿಸುತ್ತದೆ.  ಅವರು ಬರೆದಿದ್ದನ್ನು ಓದಬೇಕೆನಿಸುತ್ತದೆ.  ಹೀಗೆ ಒಬ್ಬ ಕ್ರೀಡೆಯ ಕುರಿತ passion ಉಳ್ಳವ ಹೇಗೆ ಲೋಕವನ್ನು ತನ್ನ passion ಅತ್ತ ಬರಮಾಡಿಕೊಂಡು ತಾನು ಮೇಲೇರಬಹುದು ಎಂಬುದಕ್ಕೆ ಈ ಹರ್ಷಚಿತ್ತದ ಹರ್ಷ ಭೋಗ್ಲೆ ಒಳ್ಳೆಯ ಮಾದರಿ.

Happy birthday Harsha Bhogle🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!