ಶುಕ್ರವಾರ, ಸೆಪ್ಟೆಂಬರ್ 6, 2013

ತಾಯಿಯಾ, ತಂದೆಯಾ, ಮಮತೆ ವಾತ್ಸಲ್ಯ

ತಾಯಿಯಾ, ತಂದೆಯಾ, ಮಮತೆ ವಾತ್ಸಲ್ಯಾ
ಯಾವ ದೇವರೂ, ನೀಡಬಲ್ಲ, ಜಗದೆ ನಮಗೆಲ್ಲಾ

ಸೃಷ್ಟಿ ಮಾಡುವ ಬ್ರಹ್ಮದೇವಾ
ಭಕ್ತ ಬಾಂಧವ ಮಹಾ ವಿಷ್ಣು
ಪ್ರಳಯಕಾಲಕ ಮಹಾದೇವ
ಹೆತ್ತ ಕರುಳನು ಕಾಣದೇ
ಶಿಲೆಗಳಾದರು ಲೋಕದೆ
ತಾಯಿಯಾ, ತಂದೆಯಾ, ಮಮತೆ ವಾತ್ಸಲ್ಯಾ
ಯಾವ ದೇವರೂ, ನೀಡಬಲ್ಲ, ಜಗದೆ ನಮಗೆಲ್ಲಾ

ಧನವ ನೀಡುವ ಧರ್ಮದಾತ
ವಿದ್ಯೆ ಕಲಿಸುವ ಪಾಠಶಾಲೇ
ನೀತಿ ಹೇಳುವ ಈ ಸಮಾಜ
ತಂದೆ ಪ್ರೀತಿಯ ತೋರ್ವರೇ
ತಾಯಿ ಮಮತೆಯ ಕೊಡುವರೇ
ತಾಯಿಯಾ, ತಂದೆಯಾ, ಮಮತೆ ವಾತ್ಸಲ್ಯಾ
ಯಾವ ದೇವರೂ, ನೀಡಬಲ್ಲ, ಜಗದೆ ನಮಗೆಲ್ಲಾ

ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಜಾನಕಿ

Tag: Thaayiya thandeya, taayiya tandeya

ಕಾಮೆಂಟ್‌ಗಳಿಲ್ಲ: