ಶುಕ್ರವಾರ, ಸೆಪ್ಟೆಂಬರ್ 6, 2013

ಕುಂಕುಮವಿರುವುದೆ ಹಣೆಗಾಗಿ

ಕುಂಕುಮವಿರುವುದೆ ಹಣೆಗಾಗಿ
ಅರಳಿದ ಹೂವೂ ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ
ನಾನಿರುವುದೇ ನಿನಗಾಗಿ

ಕೈ ಜಾರಿದಾ ಮುತ್ತೊಂದು
ಕೈ ಸೇರಿತು ತಾ ಬಂದು
ಹೊಸ ಹರುಷ, ಪ್ರತಿ ನಿಮಿಷ
ಶಾಂತಿ ನೀಡಿತು ನನಗಿಂದು
ನಿನಗಾಸರೆ ನಾನಾಗಿ
ನನ್ನ ಕೈಸೆರೆ ನೀನಾಗಿ
ಕನಸುಗಳು ನನಸಾಗಿ
ಬಾಳು ಹುಣ್ಣಿಮೆ ಕಡಲಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೆ ಹಣೆಗಾಗಿ
ಅರಳಿದ ಹೂವೂ ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ
ನಾನಿರುವುದೇ ನಿನಗಾಗಿ

ನನ್ನಾಸೆಯಾ ಹೂವಾಗಿ
ನನ್ನೊಲವಿನಾ ಜೇನಾಗಿ
ಜೊತೆಯಲ್ಲೇ ಒಂದಾಗಿ
ಎಂದು ನೀನಿರು ಸುಖವಾಗಿ
ನಾ ನೋಡುವಾ ಕಣ್ಣಾಗಿ
ನಾ ಹಾಡುವಾ ಹಾಡಾಗಿ
ಬಾಳಿನಲಿ ಬೆಳಕಾಗಿ
ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಮವಿರುವುದೆ ಹಣೆಗಾಗಿ
ಅರಳಿದ ಹೂವೂ ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ
ನಾನಿರುವುದೇ ನಿನಗಾಗಿ

ಚಿತ್ರ: ನಾನಿರುವುದೇ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ.
Tag: Kunkumaviruvude hanegaagi

ಕಾಮೆಂಟ್‌ಗಳಿಲ್ಲ: