ಬುಧವಾರ, ಸೆಪ್ಟೆಂಬರ್ 4, 2013

ನಾರಾಯಣ ನಿನ್ನ ನಾಮದ ಸ್ಮರಣೆಯ


ನಾರಾಯಣ ನಿನ್ನ ನಾಮದ ಸ್ಮರಣೆಯ 
ಸಾರಾಮೃತವೆನ್ನ ನಾಲಿಗೆಗೆ ಬರಲಿ

ಕೂಡುವಾಗಲಿ ನಿಂತಾಡುವಾಗಲಿ
 ಮತ್ತೆ ಹಾಡುವಾಗಲಿ ಹರಿದಾಡುವಾಗಲಿ
ಕೋಟಿ ವಿನೋದದಿ ನೋಡದೆ ನಾ
 ಬಲು ಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೇ

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಕೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ

ಕನಸಿನೊಳಗಾಗಲಿ ಕನವಲಿಕಾಗಲಿ
 ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣ ಕಮಲವನ್ನು
ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳೋ ಹಾಗೆ

ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಠ್ಠಲರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ  

ಸಾಹಿತ್ಯ; ಪುರಂದರದಾಸರುTag: Narayana ninna namada smaraneya

ಕಾಮೆಂಟ್‌ಗಳಿಲ್ಲ: