ಉತ್ತಿಷ್ಠತ ಜಾಗ್ರತ, ಮನುಜ
ಉತ್ತಿಷ್ಠತ
ಜಾಗ್ರತ,
ಮನುಜ
ಗುರಿಯನು
ಸೇರುವವರೆಗೂ,
ನೀ
ಅರೆಕ್ಷಣ
ನಿಲ್ಲದೆ ಮುನ್ನಡೆ ಸಖನೇ.
ನಿನ್ನಯ
ಗುರಿಯು ಆತ್ಮದರುಶನ
ನಿನ್ನೊಳಗೆಯೆ
ಇದೆ ಆ ರತುನ.
ಬನ್ನಪಡುತ
ಈ ಕ್ಷುದ್ರ ಜೀವನದಿ
ಇನ್ನು
ತೊಳಲದಿರು ಮುನ್ನಡೆ ಸಖನೇ.
ಮಮತೆಯ
ಈ ದೇಹವೆ ನೀನೆಂದು
ಭ್ರಮಿಸದಿರೈ
ನೀ ಎಂದೆಂದೂ.
ಅಮರ
ಆತ್ಮ ನೀ ಅಮೃತಪುತ್ರನೇ
ಅಮಲಾನಂದದಿ
ಪರಿಪೂರ್ಣನು ನೀ.
ಕೃಪೆ: ರಾಮಕೃಷ್ಣ ಮಠದ ಕೀರ್ತನ ಸಂಗ್ರಹ
Tag: Uttishtata Jagrata Manuja
ಕಾಮೆಂಟ್‌ಗಳು