ಶುಕ್ರವಾರ, ಸೆಪ್ಟೆಂಬರ್ 6, 2013

ದೇವ ಮಂದಿರದಲ್ಲೀ ದೇವರು ಕಾಣಲೇ ಇಲ್ಲ

ದೇವ ಮಂದಿರದಲ್ಲೀ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲೀ ನ್ಯಾಯವು ಸಿಗಲೇ ಇಲ್ಲ

ಸತ್ಯವೇ ಗೆಲುವುದು, ಧರ್ಮವೇ ನಿಲುವುದು
ಎನ್ನುವುದೆಲ್ಲಾ ಮಾತುಗಳು, ಬರೀ ಮಾತುಗಳು
ಮೋಸವೇ ಗೆಲುವುದು, ದ್ರೋಹವೇ ಉಳಿವುದು
ಎನುವುದ ಅರಿತೇ ಬಾಳಿನೊಳು, ನನ್ನ ಬಾಳಿನೊಳು
ದೇವ ಮಂದಿರದಲ್ಲೀ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲೀ ನ್ಯಾಯವು ಸಿಗಲೇ ಇಲ್ಲ

ಬಾಳುವ ರೀತಿಯ, ಬಾಳಿನ ನೀತಿಯ
ಕಲಿಯದೆ ಇಂದೂ ನಾ ನೊಂದೇ ನಾ ಬಲು ನೊಂದೇ
ಆಸೆಯ ಅರಮನೆ ಬೆಂಕಿಗೆ ಸಿಲುಕಲು
ಅರಿಯದೆ ಇಂದೂ ನಾ ಬೆಂದೆ, ನಾ ಬಲು ನೊಂದೇ
ದೇವ ಮಂದಿರದಲ್ಲೀ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲೀ ನ್ಯಾಯವು ಸಿಗಲೇ ಇಲ್ಲ

ಗೆಲುವಿನ ಅನುಭವ ಪಡೆಯುವ ಮೊದಲೇ
ಸೋಲಿನ ಸಂಚಿಗೆ ಬಲಿಯಾದೆ, ನಾ ಬಲಿಯಾದೆ
ಒಲವಿನ ಸಿಹಿಯನು ಸವಿಯುವ ಸಮಯದೆ
ಸಾವಿನ ಉರುಳಿಗೆ ಸೆರೆಯಾದೆ, ನಾ ಸೆರೆಯಾದೆ
ದೇವ ಮಂದಿರದಲ್ಲೀ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲೀ ನ್ಯಾಯವು ಸಿಗಲೇ ಇಲ್ಲ

ಚಿತ್ರ: ಜಿಮ್ಮಿಗಲ್ಲು
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಮತ್ತು ವಾಣಿ ಜಯರಾಂTag: Deva mandiradalli devaru kaanale illa

ಕಾಮೆಂಟ್‌ಗಳಿಲ್ಲ: