ಶನಿವಾರ, ಸೆಪ್ಟೆಂಬರ್ 7, 2013

ಮೆಲ್ಲುಸಿರೇ ಸವಿಗಾನ

ಮೆಲ್ಲುಸಿರೇ ಸವಿಗಾನ
ಎದೆ ಝಲ್ಲನೆ ಹೂವಿನ ಬಾಣ, ಪ್ರಿಯಾ!
ಮೆಲ್ಲುಸಿರೇ ಸವಿಗಾನ
ಎದೆ ಝಲ್ಲನೆ ಹೂವಿನ ಬಾಣ

ಮನದಾಸೆ ದೂಡಿದ ಬಯಕೆ
ಕನಸಾಗಿ ಕಾಡುವುದೇಕೆ?
ಮಧುಮಂಚಕೆ ವಿಧಿಹಂಚಿಕೆ
ಅದಕೇತಕೆ ಅಂಜಿಕೆ ಶಂಕೆ

ವಿರಹಾಗ್ನಿ ನಿನ್ನೆದೆ ಸುಡಲು
ಬೆಳದಿಂಗಳಾಯಿತು ಬಿಸಿಲು
ಹೋರಾಡಿದೆ ಹಾರಾಡಿದೆ
ಹಾರೈಸಿ ಪ್ರೇಮದ ಹೊನಲು

ಈ ದೇಹ ರಸಮಯ ಸದನ
ಈ ಮೇಹ ಮಧುಸಂವಹನ
ಚಿರನೂತನ ರೋಮಾಂಚನ
ದಾಂಪತ್ಯದನುಸಂಧಾನ

 ಚಿತ್ರ: ವೀರಕೇಸರಿ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಗಾಯಕರು : ಪಿ. ಸುಶೀಲ ಮತ್ತು ಘಂಟಸಾಲ
ಸಂಗೀತ: ಘಂಟಸಾಲ

Tag: Mellusire savigana, mellusire savigaana

ಕಾಮೆಂಟ್‌ಗಳಿಲ್ಲ: