ಭಾನುವಾರ, ಸೆಪ್ಟೆಂಬರ್ 8, 2013

ಅಷ್ಟೊಂದು ಎತ್ತರವನ್ನು ಕರುಣಿಸಬೇಡ

ಅಷ್ಟೊಂದು ಎತ್ತರವನ್ನು ಕರುಣಿಸಬೇಡ


ಎತ್ತರದ ಬೆಟ್ಟಗಳ ಮೇಲೆ
ಮರಗಳೆಂದೂ ಬೆಳೆಯುವುದಿಲ್ಲ
ಗಿಡಗಳೆಂದೂ ಮೊಳೆಯುವುದಿಲ್ಲ
ಹುಲ್ಲು ಕೂಡ ಹುಟ್ಟುವುದಿಲ್ಲ
ಕೇವಲ ಹಿಮ ಮಾತ್ರ ಆವರಿಸಿರುವುದು
ಶವ ಬಟ್ಟೆಯ ತರಹ ಬಿಳುಪಾಗಿ
ಸಾವಿನ ಹಾಗೆ ತಣ್ಣಗೆ
ಏ ದೇವರೇ
ನನಗೆ ಇಷ್ಟೊಂದು ಎತ್ತರವನ್ನು
ದಯಪಾಲಿಸಬೇಡ ನನ್ನ
ಆತ್ಮೀಯರನ್ನು ಆಲಂಗಿಸಲು ಸಾಧ್ಯವಾಗದಷ್ಟು
ಎತ್ತರವನ್ನು ನನಗೆಂದೂ ಕರುಣಿಸಬೇಡ


ಸಾಹಿತ್ಯ: ಅಟಲ್ ಬಿಹಾರಿ ವಾಜಪೇಯಿ


Tag: Ashtondu ettaravannu karunisabeda

ಕಾಮೆಂಟ್‌ಗಳಿಲ್ಲ: