ಶನಿವಾರ, ಸೆಪ್ಟೆಂಬರ್ 7, 2013

ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ


ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ
ತೋರೋ ಎನಗೆ ಮುಕುಂದ ನಲಿದಾಡು ಮನದಲಿ
ಮಾರಪಿತನೆ ಆನಂದ ನಂದನ್ನ ಕಂದ

ಚಾರುತರ ಶರೀರ ಕರುಣಾ
ವಾರಿನಿಧಿ ಭವಘೋರನಾಶನ
ವಾರಿಜಾಸನವಂದ್ಯ ನೀರಜ
ಸಾರಸದ್ಗುಣ ಹೇ ರಮಾಪತಿ

ನೋಡು ದಯದಿಂದೆನ್ನ ಕರಪದುಮ ಶಿರದಲಿ
ನೀಡು ಭಕ್ತಪ್ರಸನ್ನ ನಲಿದಾಡು ಮನದಲಿ
ಬೇಡಿಕೊಂಬೆನೊ ನಿನ್ನ ಆನಂದಘನ್ನ
ಮಾಡದಿರು ಅನುಮಾನವನು ಕೊಂ-
ಡಾಡುವೆನು ತವ ಮಹಿಮೆಗಳನು
ಜೋಡಿಸುವೆನು ಕರಗಳನು ಚರಣಕೆ
ಕೂಡಿಸೋ ತವ ದಾಸಜನರೊಳು
ಬಾರೋಮನೆಗೆ . . .

ಹೇಸಿ ವಿಷಯಗಳಲ್ಲೀ ತೊಳಲಾಡಿ ನಾ ಬಲು
ಕ್ಲೇಶ ಪಡುವುದ ಬಲ್ಲೀ ಧನಯುವತಿಗಳ ಸುಖ
ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ
ಏಸುಜನುಮದ ದೋಷದಿಂದಲಿ
ಈಸುವೆನು ಇದರೊಳಗೆ ಇಂದಿಗೆ
ಮೋಸವಾಯಿತು ಆದುದಾಗಲಿ
ಶ್ರೀಶ ನೀ ಕೈ ಪಿಡಿದು ರಕ್ಷಿಸೋ 
ಬಾರೋಮನೆಗೆ . . .

ನೀನೆ ಗತಿ ಎನಗಿಂದು ಉದ್ಧರಿಸೊ ಬೇಗನೆ
ದೀನಜನರಿಗೆ ಬಂಧು ನಾ ನಿನ್ನ ಸೇವಕ
ಶ್ರೀನಿವಾಸನೆ ಎಂದೆಂದು ಕಾರುಣ್ಯಸಿಂಧೂ
ಪ್ರಾಣಪತಿ ಹೃದಯಾಬ್ಜಮಂಟಪ
ಸ್ಥಾನದೊಳಗಭಿವ್ಯಾಪ್ತ ಚಿನ್ಮಯ
ಧ್ಯಾನಗೋಚರನಾಗಿ ಕಣ್ಣಿಗೆ
ಕಾಣಿಸುತ ಶ್ರೀರಂಗವಿಠ್ಠಲ
ಬಾರೋಮನೆಗೆ . . .

Tag: Baaro manege govinda, baro manege govinda

ಕಾಮೆಂಟ್‌ಗಳಿಲ್ಲ: