ಗುರುವಾರ, ಸೆಪ್ಟೆಂಬರ್ 5, 2013

ಉದ್ಯಾನದಲ್ಲಿ ಧ್ಯಾನಯೋಗಿ

ಉದ್ಯಾನದಲ್ಲಿ ಧ್ಯಾನಯೋಗಿ


ಬಾ, ನಮಸ್ಕರಿಸು,
ಸೌಂದರ್ಯರೂಪಿ ಭಗವಂತನಿಲ್ಲಿ ಪುಷ್ಪವೇಷಿ.
ಬಣ್ಣ ಬಣ್ಣವಾಶೀರ್ವದಿಸೆ,
ಬರಿಯ ಉದ್ಯಾನವಲ್ತೊ ಇದು ಪುಷ್ಪಕಾಶಿ!
ನೋಡು ಏನೆಂಬೆ ಈ ಕಾಶಿತುಂಬೆ?
ಭಾವದಿಂದ ನೀನೊಲಿದು ನಂಬೆ
ಕೆಂಪು ಕೆಂಪಲ್ಲೊ;
ದೇವರನುರಾಗವಿಳಿದು ಬರುವ ರಸರಾಮಸೇತು!
ಕಾಣು ಈ ಪೊದೆಯ ಬಿಳಿಯ ಹೂವೆದೆಯ;
ಅರ್ಬ್ಬಿ ಬೆಳ್ಳಂಗೆಡೆಯುವಂತೆ ಸೊದೆಯ
ಸ್ವರ್ಗ ಸತ್ತ್ವ ತಾ
ಮರ್ತ್ಯಭಕ್ತಿಗೋತವತರಿಸುತಿರ್ಪ ರಥಾಗ್ರಕೇತು!
ಸಟೆಯೊ ಈ ನೀಲಕುಸುಮ ಕಲ್ಲೋಲ;
ದಿಟದಿ ದೇವಕಿಯ ದಿವ್ಯ ಗರ್ಭ’
ಧ್ಯಾನಿಗುದ್ಯಾನ
ಶ್ರೀ ಕೃಷ್ಣ ಸಂಭವಕ್ಕೊಡ್ಡಿರುವ ಯೋಗಸಂದರ್ಭ!

ಸಾಹಿತ್ಯ: ಕುವೆಂಪು

Tag: Udyanadalli dhyanayogi

ಕಾಮೆಂಟ್‌ಗಳಿಲ್ಲ: