ಬುಧವಾರ, ಸೆಪ್ಟೆಂಬರ್ 4, 2013

ಹೂವ ತರುವರ ಮನೆಗೆಹೂವ ತರುವರ ಮನೆಗೆ ಹುಲ್ಲ ತರುವ
ಅವ್ವೆ ಲಕುಮಿಪತಿ ಇವಗಿಲ್ಲ ಗರುವ 

ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ
ಇಂದಿರಾರಮಣಗರ್ಪಿತವೆನ್ನಲು
ಒಂದೆ ಮನದಲಿ ಸಿಂಧುಶಯನ ಮುಕುಂದ ಎನೆ
ಎಂದೆಂದು ವಾಸಿಪನಾಮಂದಿರದೊಳಗೆ

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ
ಪರಮ ಆಸಕ್ತಿಯಲಿ ಸೇವೆಯನು ಮಾಡಿದರೆ
ಸರಿಭಾಗ ಕೊಡುವ ತನ್ನರಮನೆಯೊಳಗೆ

ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷನು ಹುಲ್ಲನು ತಿನಿಸಿದ
ಅಂಡಜವಾಹನ ಶ್ರೀಪುರಂದರವಿಠಲನು
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು 

ಸಾಹಿತ್ಯ: ಪುರಂದರದಾಸರು


Tag: Huva taruvara manege hulla taruva

ಕಾಮೆಂಟ್‌ಗಳಿಲ್ಲ: