ಮಂಗಳವಾರ, ಸೆಪ್ಟೆಂಬರ್ 3, 2013

ಸ್ತ್ರೀ


ಸ್ತ್ರೀ 
  
ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -

ಹಸಿರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ -

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ -

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ?

ಸಾಹಿತ್ಯ:  ಜಿ. ಎಸ್. ಶಿವರುದ್ರಪ್ಪ



(ಇಲ್ಲಿನ ಹಿನ್ನೆಲೆ ಚಿತ್ರದ ಬಗ್ಗೆ: ಈ ಚಿತ್ರದ ಹೆಸರು "The Glow of Hope" ಎಂದು. ಇದನ್ನು ರಚಿಸಿದವರು ಎಸ್. ಎಲ್. ಹಲದಂಕರ್. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿದೆ. ಮೈಸೂರಿಗೆ ಭೇಟಿ ನೀಡಿದಾಗ ಇದನ್ನು ತಪ್ಪದೆ ನೋಡಿ. ಈ ಚಿತ್ರದ ಮೂಲ ಪ್ರತಿ ನೀಡುವ ಅನುಭವ ವಿಶೇಷವಾದದ್ದು.)


ಸಿ. ಅಶ್ವಥ್ ಅವರ ಸಂಗೀತ ಸಂಯೋಜನೆ ಮತ್ತು ಗಾನದಲ್ಲಿ



Tag: Stree, Akaashada neeliyalli, Akashada neeliyalli

ಕಾಮೆಂಟ್‌ಗಳಿಲ್ಲ: