ಶನಿವಾರ, ಸೆಪ್ಟೆಂಬರ್ 7, 2013

ಜಯಗೌರೀ ಜಗದೀಶ್ವರೀ

ಜಯಗೌರೀ ಜಗದೀಶ್ವರೀ
ಜಯಗೌರೀ ಜಗದೀಶ್ವರೀ
ಕಾವುದೆನ್ನ ಕಲಾಸಾಗರೀ
ಜಯಗೌರೀ ಜಗದೀಶ್ವರೀ

ಸುಮಧುರಗಾನ ಸುಲಲಿತತಾನ
ಸುಮಧುರಗಾನ ಸುಲಲಿತತಾನ
ಬೇಡುವೆನಾ ಸುಧಾಮಯಿದಾನ
ಧಿಮಿಕಿಟತಾಳ ಸ್ವರಾವಳಿ ಮೇಳ
ಧಿಮಿಕಿಟತಾಳ ಸ್ವರಾವಳಿ ಮೇಳ
ಮಂಜುಳ ಮಂಗಳ ನಾದನೀ
ಜಯಗೌರೀ ಜಗದೀಶ್ವರೀ

ಭವಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಭವಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಪರಶಿವಜಾಯೆ ಪ್ರಭಾವತಿ ಕಾಯೆ
ಪರಶಿವಜಾಯೆ ಪ್ರಭಾವದತಿ ಕಾಯೆ
ತಾಯೆ ಮಾಯೆ ದೇವಿಯೇ
ಜಯಗೌರೀ ಜಗದೀಶ್ವರೀ

ಚಿತ್ರ: ಗಂಗೆ ಗೌರಿ
ಸಾಹಿತ್ಯ: ಎಸ್. ಕೆ. ಕರೀಂಖಾನ್
ಸಂಗೀತ: ಎಂ. ವೆಂಕಟರಾಜು
ಗಾಯನ: ಎಸ್. ಜಾನಕಿ

(ಗೀತೆಯ ವಿಡಿಯೋ ನೇರವಾಗಿ ಲಭ್ಯವಿಲ್ಲದ ಕಾರಣ ಈ ಗೀತೆ ಇರುವ ಚಿತ್ರದ ತುಣುಕಿನ ಕೊಂಡಿಯನ್ನು ನೀಡುತ್ತಿದ್ದೇನೆ. )
Tag: Jaya Gowri Jagadeeshwari, Jaya Gouri Jagadheeshwari, Jagadhishwari


ಕಾಮೆಂಟ್‌ಗಳಿಲ್ಲ: