ಶನಿವಾರ, ಸೆಪ್ಟೆಂಬರ್ 7, 2013

ಕಂಡೆ ಹರಿಯ ಕಂಡೆ ಹರಿಯ ಕಂಡೆ

ಕಂಡೆ ಹರಿಯ ಕಂಡೆ ಹರಿಯ ಕಂಡೆ,
ದೇವಾದಿದೇವ ಧನುಜಾದಿ ವಂದ್ಯ ಧರಣೀಶನ
ದಿವ್ಯ ಚರಣ ಕಮಲ ಯುಗವ
ಕಂಡೆ ಹರಿಯ ಕಂಡೆ

ಪಾವನವಾಯಿತು ಕುಲ ಕೋಟಿಗಳು,
ಪುಟಿದು ಹೋದವು ಪರಿತಾಪಗಳು,
ಬೇರೇನೂ ಬೇಕಿಲ್ಲ ಸಾಕು
ಇದುವೇ ಅನಂತ ಭಾಗ್ಯ,
ಕಂಡೆ ಹರಿಯ ಕಂಡೆ

ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು,
ಒಳಗೂ,  ಹೊರಗೂ ಬೆರೆಯುವವ ಹಾಗೆ,
ಸಖಿಯರ ಒಡನೆ ಕುಣಿಯುವ ಹರಿಯ,
ಚರಣ ಕಿಂಕಿಣಿ ನಾದದ ಇಂಪು,
ರಾಗ ಭಾವಗಳು ಬೆಸೆದಿಹ ಸೊಂಪು,
ಮಂದ ಹಾಸದಲಿ ಮಿಂದ ಲಾಸ್ಯದಲಿ
ಕುಣಿದು ಕುಣಿಸೊ ಕಲಾಪವನ್ನೇ
ಕಂಡೆ ಹರಿಯ ಕಂಡೆ

ಅಸಮಾನ ಕಲೆಗಾರ ಇವ ನಮ್ಮ ವಿಠಲ,
ರಸವಂತ ಗುಣವಂತ ಶೃಂಗಾರ ಲೋಲ,
ಯೋಗಿಯೋ ಭೋಗಿಯೋ ಬಲ್ಲವರಿಲ್ಲ,
ರಸಿಕ ರಂಗನ ಅನಾಥ ಪಿತನ
ಹಾವ ಭಾವಗಳ ಒಳಗಿನ ಮರ್ಮ
ತಿಳಿದು ನಾನಿಂದು ತಳೆದೆ ಆನಂದ
ಪ್ರಣವಭರಿತ ವಿಹಾರವನ್ನೆ
ಕಂಡೆ ಹರಿಯ ಕಂಡೆ

ಚಿತ್ರ: ಭಕ್ತಕುಂಬಾರ

ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಗಾಯನ: ಪಿ. ಬಿ. ಶ್ರೀನಿವಾಸ್
ಸಂಗೀತ: ಜಿ. ಕೆ. ವೆಂಕಟೇಶ್


Tag: kande hariya kande

ಕಾಮೆಂಟ್‌ಗಳಿಲ್ಲ: