ಶುಕ್ರವಾರ, ಸೆಪ್ಟೆಂಬರ್ 6, 2013

ನಮ್ಮೂರ ಯುವರಾಣಿ ಕಲ್ಯಾಣವಂತೆ

ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರೂ
ಮನಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ಒಳ್ಳೆ ದಿನ ಘಳಿಗೆಯ ಕೂಡಿಸಿ
ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ
ಕರೆದಾಗಲೆ ಮದುವೆಯೆ?

ಸರಿಗಮ ಪಧನಿಸ ಊದಿಸಿ
ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ
ಅಕ್ಷತೆಯಲ್ಲೆ ಮದುವೆಯೆ?

ನಿಜವಾಗಿ ನನಗೇನು ತೋಚದೆ
ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ
ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ, ಕೇಳಿದ್ದು ಸತ್ಯ
ಸುಳ್ಯಾವುದೆ ಕೋಗಿಲೆ?
ಮಾಂಗಲ್ಯದಿಂದ ನಂಟಾದರೂ, ಮಾಂಗಲ್ಯದಿಂದ ನಂಟಾದರೂ
ಮನಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ನನ್ನನೊಂದು ಬೊಂಬೆಯೆಂದು ಮಾಡಿದ
ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ, ಮನೆಯಾಳು ನಾನಿಲ್ಲಿ
ನನ್ನ ಹಾಡಿಗೇ ಬೆಲೆಯೆ?
ಹಣೆಯಲಿ ಬಡತನ ಗೀಚಿದ
ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು, ಹಸು ಎಮ್ಮೆ ಮೇಯ್ಸೋನು
ಸೋಪಾನಕೇ ಸರಿಯೆ?
ಇರುಳಲ್ಲಿ ಬರಿ ಬಾವಿ ನೋಡಿದೆ
ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ
ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು, ಕುಣಿಸೋನು ನೀನು
ನಾ ಯಾರಿಗೆ ಹೇಳಲೆ?
ಮಾಂಗಲ್ಯದಿಂದ ನಂಟಾದರೂ, ಮಾಂಗಲ್ಯದಿಂದ ನಂಟಾದರೂ
ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ಚಿತ್ರ: ರಾಮಾಚಾರಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಕೆ. ಜೆ. ಏಸುದಾಸ್
Tag: Nammoora yuvaraani kalyaanavantte, nammura yuvarani kalyanavante

ಕಾಮೆಂಟ್‌ಗಳಿಲ್ಲ: