ವಾಗರ್ಥಾವಿವ ಸಂಪೃಕ್ತೌ
वागर्थाविव सम्प्रुक्तौ वागर्थप्रतिपत्तये
जगतः पितरौ वन्दे पार्वतीपरमेश्वरौ
ವಾಗರ್ಥಾವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ
ಮಾತಾಪಿತರ ಆಶೀರ್ವಾದದಿಂದ ಆರಂಭಿಸುವ ಕಾರ್ಯಗಳು ಸಫಲವಾಗುವುದೆಂಬುದು ಭಾರತೀಯರ ಪರಂಪರಾಗತ ನಂಬಿಕೆ. ಸಂಸ್ಕೃತದ ಶ್ರೇಷ್ಠ ಕವಿ ಕಾಳಿದಾಸನು ತನ್ನ ರಘುವಂಶ ಮಹಾಕಾವ್ಯದ ರಚನೆಯಲ್ಲಿ ಮಂಗಳ ಶ್ಲೋಕವಾಗಿ ವಾಕ್ (ಶಬ್ದ) ಮತ್ತು ಅರ್ಥ (ಅರ್ಥಕ್ಕಿರುವ ಭಾವ)ಗಳು ಬೇರ್ಪಡಿಸಲಾಗದ ಹಾಗೆ ಒಂದಾಗಿರುವಂತೆ ಜಗತ್ತಿಗೆ ತಂದೆ ತಾಯಿಯರ ರೂಪದಲ್ಲಿರುವ ಪರಮೇಶ್ವರ ಪಾರ್ವತಿಯರನ್ನು ಈ ಶ್ಲೋಕಮುಖೇನ ವಂದಿಸುತ್ತಿದ್ದಾನೆ.
ತಂದೆ ತಾಯಿಯರ ಮತ್ತು ಆ ಮೂಲಕ ಜಗತ್ತಿನ ತಂದೆ ತಾಯಿಯರಾದ ಪಾರ್ವತಿ ಪರಮೇಶ್ವರರ ಕೃಪೆ ನಮ್ಮೆಲ್ಲರ ಮೇಲಿರಲಿ.🌷🙏🌷
Tag: Vagarthaviva samprukthou, Vaagarthaaviva samprukthou
ಕಾಮೆಂಟ್‌ಗಳು