ಬುಧವಾರ, ಸೆಪ್ಟೆಂಬರ್ 4, 2013

ರೋಗಹರನೆ ಕೃಪಾಸಾಗರ


ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇಂದ್ರ ಪರಿಪಾಲಿಸೋ

ಸಂತತ ದುರ್ವಾದಿಧ್ವಾಂತ ದಿವಾಕರ
ಸಂತವಿನುತ ಮಾತ ಲಾಲಿಸೊ

ಪಾವನಗಾತ್ರ ಭೂದೇವವರನೆ ತವ
ಸೇವಕಜನರೊಳಗಾಡಿಸೋ

ಘನ್ನಮಹಿಮ ಜಗನ್ನಾಥವಿಠ್ಠಲಪ್ರಿಯ
ನಿನ್ನಾರಾಧನೆ ಮಾಡಿಸೋ

ಸಾಹಿತ್ಯ: ಜಗನ್ನಾಥದಾಸರು


Tag: Rogaharane krupa

ಕಾಮೆಂಟ್‌ಗಳಿಲ್ಲ: