ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಾಡು ಕೋಗಿಲೆ ನಲಿದಾಡು ಕೋಗಿಲೆ


ಹಾಡು ಕೋಗಿಲೆ ನಲಿದಾಡು ಕೋಗಿಲೆ
ರಾಘವೇಂದ್ರ, ರಾಘವೇಂದ್ರ
ರಾಘವೇಂದ್ರ, ರಾಘವೇಂದ್ರ
ಎಂದು ಹಾಡು ಈಗಲೆ
ಎಂದು ಹಾಡು ಈಗಲೇ

ಹರಿವ ನದಿಯ ಕಲರವದಲಿ
ನಿನ್ನ ದನಿಯು ಸೇರಲಿ
ಗಾಳಿಯೊಡನೆ ತೇಲಿ ಹೋಗಿ
ದೂರ ದೂರ ಸಾಗಲಿ
ಎಲ್ಲಿ ತಿರುಗಲಲ್ಲಿ ನಿನ್ನ
ಮಧುರ ಗಾನ ಕೇಳಲಿ
ಮಧುರ ಗಾನ ಕೇಳಲೀ

ಮಧುವನರಸಿ ಹೋಗುತಿರುವ
ದುಂಬಿಗಳು ಕೇಳಲಿ
ಹೃದಯ ತುಂಬಿ ಬಂದ ದನಿಗೆ
ತಮ್ಮ ಶೃತಿಯ ಬೆರಸಲಿ
ಕುಸುಮ ಕುಸುಮದಲ್ಲು ಅವನ
ನಾಮ ತುಂಬಿ ಹೋಗಲಿ
ನಾಮ ತುಂಬಿ ಹೋಗಲೀ

ನಿನ್ನ ದನಿಯ ಸವಿಯ ಕೇಳಿ
ಜೀವ ರಾಶಿ ನಲಿಯಲಿ
ಎಲ್ಲ ಮರೆತು ನಿನ್ನ ಸ್ವರಕೆ
ಕೊರಳ ಬೆರಸಿ ಹಾಡಲಿ
ರಾಘವೇಂದ್ರನೆಂಬ ಧ್ಯಾನ
ಜಗವನೆಲ್ಲ ಕುಣಿಸಲಿ
ಜಗವನೆಲ್ಲ ಕುಣಿಸಲೀ

ಸಾಹಿತ್ಯ: ಚಿ. ಉದಯಶಂಕರ್

ಗಾಯನ: ರಾಜ್ ಕುಮಾರ್

Tag: Haadu Kogile Nalidaadu kogile

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ