ಸ್ವಾಮಿದೇವನೆ ಲೋಕಪಾಲನೆ ಚಿತ್ರಗೀತೆ
ಸ್ವಾಮಿದೇವನೆ
ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ
ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ
ದೇವ ದೇವನೆ ಹಸ್ತ
ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ
ಪಾಪವೆಲ್ಲವ ಹೋಗಲಾಡಿಸು ಬೇಗನೆ
ವಿಜಯವಿದ್ಯಾರಣ್ಯ
ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ
ಐಕ್ಯಗಾನವ ಲಾಲಿಸೈ ಪರಿಪಾಲಿಸೈ
ಚಿತ್ರ: ಸ್ಕೂಲ್
ಮಾಸ್ಟರ್
ಚಿತ್ರಗೀತೆ ಸಾಹಿತ್ಯ:
ಕಣಗಾಲ್ ಪಭಾಕರ ಶಾಸ್ತ್ರಿ
(ಮೂಲ
ಸಾಹಿತ್ಯ: ಸೋಸಲೆ ಅಯ್ಯಾ ಶಾಸ್ತ್ರಿಗಳು)
ಸಂಗೀತ: ಟಿ. ಜಿ.
ಲಿಂಗಪ್ಪ
ಗಾಯನ: ಟಿ. ಜಿ.
ಲಿಂಗಪ್ಪ ಮತ್ತು ಸಂಗಡಿಗರು
Tag: Swami Devane Lokapalane
ಕಾಮೆಂಟ್‌ಗಳು