ಭಾನುವಾರ, ಮಾರ್ಚ್ 23, 2014

ಓ ಮೆಘಗಳ ಬಾಗಿಲಲಿ ಚಂದ್ರಮುಖಿ

ಓ ಮೆಘಗಳ ಬಾಗಿಲಲಿ ಚಂದ್ರಮುಖಿ
ಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ
ಒಲವಿನ ಹೃದಯಕೆ ಪನ್ನೀರಲಿ
ಅಭಿಷೇಕವ ಮಾಡಿದಳು
ಅದರಲಿ ಉದಯಿಸೊ ಹೊಸ ಹೊಸ ಆಸೆಗೆ
ಸ್ಪೂರ್ತಿಯ ನೀಡಿದಳು

ಕಲ್ಯಾಣವೇ ಕಲ್ಯಾಣವೇ
ಮನಸಿಗೆ ಕಲ್ಯಾಣವೇ
ನೇಸರನ ಪಲ್ಲಂಗದಿ
ಪ್ರಣಯಕೆ ಸೋಬಾನವೆ
ಕುಹೂ ಕುಹೂ ಕೋಗಿಲೆ
ವಸಂತಕೆ ಬಾರೆಲೇ
ಸಖಿಯರ ಸೇರೆ ನೀ
ಸುಖಿ ಪದ ನೀಡೆ ನೀ
ರವಿತೇಜನೇ ದಾರಿ ಬಿಡು
ಬೆಳದಿಂಗಳ ತೇರಿಗೆ
ತಂಗಾಳಿಯೇ ತಂಪು ಕೊಡು
ಸಂಗಾತಿ ಸಂಗಕ್ಕೆ
ಸಂಪ್ರೀತಿ ತೋಟಕ್ಕೆ

ಓ ಗಂಗೆಯೇ ಈ ಪ್ರೇಮಕೆ
ಎಂದೆಂದು ನೀ ಕಾವಲು
ಈ ಜನ್ಮವು ನಿನಗಾಗಿಯೇ
ನನ್ನಾಣೆಗೂ ಮೀಸಲು
ಓ ಗಿರಿ ಕಡಲಂತೆಯೇ
ನಮ್ಮ ಪ್ರೀತಿ ಶಾಶ್ವತ
ಮೈನಾಗಳು ನೀಡಿತು
ಇಂದು ನಮಗೆ ಸಮ್ಮತ
ಸಂತೋಷದ ನಾದಸ್ವರ
ಈ ನಿನ್ನ ತೋಳಿಂದಲೇ
ಈ ಮಾತಲೇ ಸಪ್ತಸ್ವರ
ಅಲೆಯಾಗಿ ಅಲೆಯಾಗಿ
ಅನುರಾಗ ಕಡಲಾಯ್ತು

ಚಿತ್ರ: ಸೂರ್ಯವಂಶ
ರಚನೆ: ಎಸ್. ನಾರಾಯಣ್
ಸಂಗೀತ: ವಿ. ಮನೋಹರ್
ಗಾಯನ: ರಾಜೇಶ್ ಕೃಷ್ಣನ್ ಮತ್ತು ಚಿತ್ರಾಕಾಮೆಂಟ್‌ಗಳಿಲ್ಲ: