ಶನಿವಾರ, ಫೆಬ್ರವರಿ 7, 2015

ತಪ್ಪು ನೋಡದೆ ಬಂದೆಯಾ


ತಪ್ಪು ನೋಡದೆ ಬಂದೆಯಾ ನನ್ನ ತಂದೆಯೆ

 ಅಪ್ಪ ತಿರುವೆಂಗಳೇಶನೆ ನಿರ್ದೋಷನೆ 
 ಆಪಾದಮೌಳಿ ಎನ್ನೊಳು ಅಘ ಬಹಳ

 ಶ್ರೀಪತಿ ಕ್ಷಮಿಸಿ ಕಾಯಿದೆಯ ಉದಧಿಶಯ್ಯಾ 
 ಜಗದಘಹರನೆಂಬುದು ನಿನ್ನ ಬಿರುದು

 ತ್ರಿಗುಣಾತೀತನೆ ರಾಮನೆ ಗುಣಧಾಮನೆ 
 ಇನ್ನೆನ್ನ ಕಲುಷವಾರಿಸೊ ಭವತಾರಿಸೊ 
ಪ್ರಸನ್ನ ವೆಂಕಟರಮಣ ಭಯಶಮನ 


ಸಾಹಿತ್ಯ: ಪ್ರಸನ್ನ ವೆಂಕಟದಾಸರು

Tag: Tappu Nodade Bandeya

ಕಾಮೆಂಟ್‌ಗಳಿಲ್ಲ: