ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಪ್ಪು ನೋಡದೆ ಬಂದೆಯಾ


ತಪ್ಪು ನೋಡದೆ ಬಂದೆಯಾ ನನ್ನ ತಂದೆಯೆ

 ಅಪ್ಪ ತಿರುವೆಂಗಳೇಶನೆ ನಿರ್ದೋಷನೆ 
 ಆಪಾದಮೌಳಿ ಎನ್ನೊಳು ಅಘ ಬಹಳ

 ಶ್ರೀಪತಿ ಕ್ಷಮಿಸಿ ಕಾಯಿದೆಯ ಉದಧಿಶಯ್ಯಾ 
 ಜಗದಘಹರನೆಂಬುದು ನಿನ್ನ ಬಿರುದು

 ತ್ರಿಗುಣಾತೀತನೆ ರಾಮನೆ ಗುಣಧಾಮನೆ 
 ಇನ್ನೆನ್ನ ಕಲುಷವಾರಿಸೊ ಭವತಾರಿಸೊ 
ಪ್ರಸನ್ನ ವೆಂಕಟರಮಣ ಭಯಶಮನ 


ಸಾಹಿತ್ಯ: ಪ್ರಸನ್ನ ವೆಂಕಟದಾಸರು

Tag: Tappu Nodade Bandeya

ಕಾಮೆಂಟ್‌ಗಳು

  1. ವೆಂಗಳೇಶ ಪದದ ಅರ್ಥ ತಿಳಿಸಿ

    ಜನಪ್ರಚಲಿತದಲ್ಲಿ ತಿರು ವೆಂಕಟೇಶ ಎಂದು ನಂಬಿಕೆಯಲ್ಲವೇ?
    ಅಲ್ಲದೆ ಪ್ರಸನ್ನ ವೆಂಕಟಗಿರಿ ದಾಸರು ಬರೆದಿದ್ದಾರೆ

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ